ಜಿಲ್ಲಾ ಮಟ್ಟದ ಕೆ ಡಿ ಪಿ ಸಭೆಯಲ್ಲಿ ನಾಮ ನಿರ್ದೇಶಕ ಸದಸ್ಯೆ ಸುಜಯ ಕೃಷ್ಣ ಭಾಗಿ

0

ಸರಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಕಲಿಕೆಯಿಂದ ಆಗುವ ಸಮಸ್ಯೆ ಮತ್ತು ಕೃಷಿ ಇಲಾಖೆಗೆ ಸಂಬಂಧಿಸಿದ ಸಮಸ್ಯೆ ಬಗ್ಗೆ ಪ್ರಶ್ನೆ

ಮಂಗಳೂರಿನಲ್ಲಿ ನಡೆದ ಜಿಲ್ಲಾ ಮಟ್ಟದ ಕೆ ಡಿ ಪಿ ಸಭೆಯಲ್ಲಿ ಸುಳ್ಯದ ನಾಮ ನಿರ್ದೇಶಕ ಸದಸ್ಯೆ ಶ್ರೀಮತಿ ಸುಜಯ ಕೃಷ್ಣ ಭಾಗವಹಿದ್ದರು.

ಸಭೆಯಲ್ಲಿ ಅವರು ‘ಕನ್ನಡ ಮಾಧ್ಯಮ ಶಾಲೆಗಳಲ್ಲಿ ಆಂಗ್ಲ ಮಾಧ್ಯಮವನ್ನು ಪ್ರಾರಂಭಿಸಿದ್ದು, ಇದರಿಂದಾಗಿ ಕನ್ನಡ ಮಾದ್ಯಮ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದ್ದು, ಶಾಲೆಯನ್ನು ಮುಚ್ಚುವಂತಹ ಪರಿಸ್ಥಿತಿ ಬಂದಿರುವುದಾಗಿ ಪ್ರಸ್ತಾಪಿಸಿದಾಗ

ಜನ ಪ್ರತಿನಿಧಿಗಳ ಮತ್ತು ಸಾರ್ವಜನಿಕರ ಬೇಡಿಕೆ ಮೇರೆಗೆ ಕೆಲವೊಂದು ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಪ್ರಾರಂಭಿಸಲು ಸರ್ಕಾರದಿಂದ ಅನುಮತಿಯನ್ನು ನೀಡಲಾಗಿರುತ್ತದೆ ಎಂದು ಉಪನಿರ್ದೇಶಕರು, ಸಾರ್ವಜನಿಕ ಶಿಕ್ಷಣ ಇಲಾಖೆ ಇವರು ಮಾಹಿತಿಯನ್ನು ನೀಡಿ, ಎಲ್ಲಾ ಶಾಲೆಗಳನ್ನು ಕೆಪಿಎಸ್‌ಸಿ ಮಾದರಿಯ ಶಾಲೆಯನ್ನಾಗಿ ಮಾಡಲು ಸರ್ಕಾರಕ್ಕೆ ಬೇಡಿಕೆ ಸಲ್ಲಿಸುವಂತೆ ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕರು ಸಭಾಧ್ಯಕ್ಷರಲ್ಲಿ ಕೇಳಿಕೊಂಡರು.

ಇಲಾಖಾ ಕಾರ್ಯಕ್ರಮಗಳ ಪ್ರಗತಿ ವರದಿಯ ಬಗ್ಗೆ ಕೃಷಿ ಇಲಾಖೆಗೆ ಸಂಭಂದಿಸಿದ ವಿಷಯದಲ್ಲಿ ಮುಂಗಾರಿಗೆ ಸಂಬಂಧಿಸಿ ನಿರೀಕ್ಷಿತ ಮಳೆಯಾಗುತ್ತಿದೆ. ಬಿತ್ತನೆ ಬೀಜಕ್ಕೆ ಸಂಬಂಧಿಸಿದಂತೆ 576 ಕ್ವಿಂಟಾಲ್ ದಾಸ್ತಾನು ಮಾಡಲಾಗಿದ್ದು, 422 ಕ್ವಿಂಟಾಲ್ ವಿತರಿಸಲಾಗಿರುತ್ತದೆ. ಪ್ರಸ್ತುತ ಯಾವುದೇ ಸಮಸ್ಯೆ ಇರುವುದಿಲ್ಲ ಎಂದು ಜಂಟಿ ನಿರ್ದೇಶಕರು ಕೃಷಿ ಇಲಾಖೆ ಇವರು ಸಭೆಗೆ ಮಾಹಿತಿ ನೀಡಿದಾಗ ಈ ಬಗ್ಗೆ ಸುಜಯ ಕೃಷ್ಣ ರವರು ಮಾತನಾಡಿ ‘ಕೃಷಿಕರಿಗೆ ಸರ್ಕಾರದಿಂದ ರೂ.3.00 ಲಕ್ಷ ಕೃಷಿಸಾಲವನ್ನು ನೀಡಲಾಗುತ್ತಿತ್ತು. ಪ್ರಸ್ತುತ ರೂ.5.00ಲಕ್ಷ ಸಾಲವನ್ನು ನೀಡುವುದಾಗಿ ತಿಳಿಸಲಾಗಿತ್ತು. ಆದರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈವರೆಗೂ ಕೃಷಿಕರಿಗೆ ರೂ.5.00ಲಕ್ಷ ಕೃಷಿಸಾಲವನ್ನು ಮಂಜೂರು ಮಾಡಿರುವುದಿಲ್ಲವೆಂದು ತಿಳಿಸಿದಾಗ,

2023-24ನೇ ಸಾಲಿನಲ್ಲಿ 1552 ಜನ ಕೃಷಿಕರಿಗೆ ರೂ.72.95 ಕೋಟಿ ಕೃಷಿ ಸಾಲವನ್ನು ನೀಡಲಾಗಿದೆ. 2024-25ನೇ ಸಾಲಿನಲ್ಲಿ 67 ಜನ ಕೃಷಿಕರಿಗೆ ರೂ.3.53 ಕೋಟಿ ಶೂನ್ಯ ಬಡ್ಡಿಯಲ್ಲಿ ಕೃಷಿ ಸಾಲವನ್ನು ಮಂಜೂರು ಮಾಡಲಾಗಿರುತ್ತದೆ ಎಂದು ಜಂಟಿ ಕೃಷಿ ನಿರ್ದೇಶಕರು, ಕೃಷಿ ಇಲಾಖೆ ಇವರು ಮಾಹಿತಿ ನೀಡಿದಾಗ, ಈ ಹಿಂದೆ ಕೃಷಿಕರಿಗೆ ಶೇ.8ರಂತೆ ಸಾಲವನ್ನು ನೀಡಲಾಗುತ್ತಿದ್ದು ಪ್ರಸ್ತುತ ಶೇ.6ರಂತೆ ಸಾಲವನ್ನು ನೀಡಲಾಗುತ್ತಿದ್ದು, ಶೇ.1.50 ನಷ್ಟವಾಗಿರುತ್ತದೆ. ಸದರಿ ನಷ್ಟವನ್ನು ಭರಿಸಲು ಕಷ್ಟವಾಗುವುದರಿಂದ ಸಮಸ್ಯೆಯಾಗಿರುತ್ತದೆ. ಈ ಬಗ್ಗೆ ಸರ್ಕಾರದ ಗಮನಕ್ಕೆ ತರಲಾಗಿದೆಯೆಂದು ಕೋ-ಅಪರೇಟಿವ್ ಬ್ಯಾಂಕ್‌ನ ಇಲಾಖಾಧಿಕಾರಿಯವರು ಸಭೆಗೆ ಮಾಹಿತಿಯನ್ನು ನೀಡಿದಾಗ, ಡಿ.ಸಿ.ಸಿ ಬ್ಯಾಂಕ್‌ನ ಅಧ್ಯಕ್ಷರೊಂದಿಗೆ ಚರ್ಚಿಸಿ, ಸಮಸ್ಯೆಯನ್ನು ಸರಿಪಡಿಸಿ ಕೃಷಿಕರಿಗೆ ಶೇ.100ರಷ್ಟು ಸಾಲವನ್ನು ಕಡ್ಡಾಯವಾಗಿ ಮಂಜೂರು ಮಾಡಲು ಕ್ರಮವಹಿಸುವಂತೆ ಸಭಾಧ್ಯಕ್ಷರು ಸೂಚಿಸಿದರು.