ಸುಬ್ರಹ್ಮಣ್ಯದಲ್ಲಿ ರೋಟರಿ ಜಿಲ್ಲಾ ಸಾಂಸ್ಕೃತಿಕ ಸ್ಪರ್ಧೆ

0

ಗ್ರಾಮೀಣ ಪ್ರದೇಶದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ವೈಭವಿಕರಿಸಲಿ : ವಿಕ್ರಂ ದತ್ತ

ಸುಬ್ರಹ್ಮಣ್ಯದಲ್ಲಿ ರೋಟರಿ ಕ್ಲಬ್‌ ವತಿಯಿಂದ. ರೋಟರಿ ಜಿಲ್ಲಾ ಸಾಂಸ್ಕೃತಿಕ ಸ್ಪರ್ಧೆ ಅ. 20 ರಂದು ನಡೆಯಿತು.

ಸುಬ್ರಹ್ಮಣ್ಯದ ಕುಮಾರಸ್ವಾಮಿ ವಿದ್ಯಾಲಯದಲ್ಲಿ ನಡೆದ ಕುಮಾರ ಕಲಾ ವೈಭವ ವನ್ನು ಉದ್ಘಾಟಿಸಿ
ಮಾತನಾಡಿದ ರೋಟರಿ ಜಿಲ್ಲೆ 31 81ರ ಜಿಲ್ಲಾ ಗವರ್ನರ್ ವಿಕ್ರಮ ದತ್ತ
ಅಂತರಾಷ್ಟ್ರೀಯ ಸಂಸ್ಥೆಯಾದ ರೋಟರಿ ಇಂದ ಸಮಾಜಮುಖಿ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತ ಬರುತ್ತಿದೆ ಅದರೊಂದಿಗೆ ಜನರು ರೋಟರಿಗೆ ಹೆಚ್ಚು ಹೆಚ್ಚು ಆಕರ್ಷಣೀಯ ಆಕರ್ಷಣೆಗೊಂಡು ಸದಸ್ಯತನ ಸಂಖ್ಯೆ ಕೂಡ ವೃದ್ಧಿಯಾಗುವಲ್ಲಿ ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಸ್ಪರ್ಧೆಗಳು ಪೂರಕವಾಗಿದೆ ಹಾಗೂ ಸಹಕಾರಿಯಾಗಿದೆ. ನಮ್ಮ ದೇಶದ ನಾಲ್ಕು ವಲಯಗಳಲ್ಲಿ ಪ್ರತಿವರ್ಷ ಸದಸ್ಯದ ತನ್ನ ಸಂಖ್ಯೆ ವೃದ್ಧಿಗೊಳ್ಳುತ್ತಿದ್ದು ರೋಟರಿ ಜಿಲ್ಲೆ 31 81 ಮುಂಚೂಣಿಯಲ್ಲಿದೆ ಎಂದು ನುಡಿದರು.

ಸಮಾರಂಭದ ಅಧ್ಯಕ್ಷತೆಯನ್ನು ಸುಬ್ರಹ್ಮಣ್ಯ ರೋಟರಿ ಕ್ಲಬ್ ಅಧ್ಯಕ್ಷ ಚಂದ್ರಶೇಖರ ನಾಯರ್ ವಹಿಸಿದ್ದರು. ವೇದಿಕೆಯಲ್ಲಿ ಡಿಜಿಎನ್. ಸತೀಶ್ ಬೋಳಾರ್, ಸವಣೂರು ವಿದ್ಯಾರಶ್ಮಿ ವಿದ್ಯಾಸಂಸ್ಥೆಗಳ ಸಂಚಾಲಕ ಸೀತಾ ರಾಮ ರೈ ಸವಣೂರು, ಜಿಲ್ಲಾ ಅಡ್ಮಿನ್ ಕಾರ್ಯದರ್ಶಿ ರಿತೇಶ್ ಬಾಳಿಗ, ಅಸಿಸ್ಟೆಂಟ್ ಗವರ್ನರ್ ವಿನಯಕುಮಾರ್, ಜಿಲ್ಲಾ ಸಾಂಸ್ಕೃತಿಕ ಕಾರ್ಯಕ್ರಮಗಳ ಚೇರ್ಮನ್ ಸತೀಶ್, ವೈಸ್ ಚೇರ್ಮನ್ ಗೋಪಾಲ್ ಎಣ್ಣೆ ಮಜಲ್, ಇವೆಂಟ್ ಚರ್ಮನ್ ಬಾಲಕೃಷ್ಣ ಪೈ, ಜೋನಲ್ ಲೆಫ್ಟಿನೆಂಟ್ ವಿಶ್ವನಾಥ ನಡು ತೋಟ, ನಿಕಟ ಪೂರ್ವ ಅಧ್ಯಕ್ಷ ಪ್ರಶಾಂತ್ ಕೋಡಿಬೈಲ್, ಕಾರ್ಯದರ್ಶಿ ಚಿದಾನಂದ ಕುಳ, ಉಪಸ್ಥಿತರಿದ್ದರು.
ರೋಟರಿ ಜಿಲ್ಲೆ 31 81 ರ 9 ವಲಯಗಳಲ್ಲಿ ವಿಜೇತರಾದ ಸ್ಪರ್ಧಿಗಳು ಭಾಗವಹಿಸಿದ್ದರು. ರೋಟರಿ ಪುರುಷ ಮಹಿಳೆಯರಿಗೆ ಮಕ್ಕಳಿಗೆ ವಿವಿಧ ಸ್ಪರ್ಧೆಗಳಾದ ಸೋಲೋ ಸಿಂಗಿಂಗ್, ಗ್ರೂಪ್ ಸಿಂಗಿಂಗ್, ಗ್ರೂಪ್ ಡ್ಯಾನ್ಸ್, ಸ್ಕಿಟ್ ,ಸ್ಪರ್ಧೆಗಳು ನಡೆದವು. ಸಾಂಸ್ಕೃತಿಕ ವೈಸ್ ಚೇರ್ಮನ್ ಗೋಪಾಲ್ ಎಣ್ಣೆ ಮಜಲ್ ಸ್ವಾಗತಿಸಿದರು. ಕಾರ್ಯದರ್ಶಿ ಚಿದಾನಂದ ಕುಳ ವಂದಿಸಿದರು .ಪೂರ್ವ ಎ.ಜಿ. ರಾಮಕೃಷ್ಣ ಮಲ್ಲಾರ ಕಾರ್ಯಕ್ರಮ ನಿರೂಪಿಸಿದರು.