ರೋಟರಿ ಕ್ಲಬ್ ಸುಳ್ಯ ವತಿಯಿಂದ ಕೊಡಿಯಾಲಬೈಲು ಪ್ರ.ದ. ಕಾಲೇಜಿನಲ್ಲಿ -CPR ಫಸ್ಟ್ ಏಡ್ ಟ್ರೈನಿಂಗ್ ಕಾರ್ಯಕ್ರಮ

0

ರೋಟರಿ ಕ್ಲಬ್ ಸುಳ್ಯ ವತಿಯಿಂದ ಕೊಡಿಯಾಲಬೈಲು ಪ್ರ.ದ. ಕಾಲೇಜಿನಲ್ಲಿ -CPR ಫಸ್ಟ್ ಏಡ್ ಟ್ರೈನಿಂಗ್ ಕಾರ್ಯಕ್ರಮ ಅ. 22ರಂದು ಸರಕಾರಿ ಪ್ರಥಮ ದರ್ಜೆ ಕಾಲೇಜ್ ಕೊಡಿಯಾಲಾಬೈಲ್ ನಲ್ಲಿ ನಡೆಯಿತು.


ಮಕ್ಕಳಿಗೆ ಹೃದಯ ಸ್ಥಂಭನದ ಪ್ರಥಮ ಚಿಕಿತ್ಸೆ ಬಗ್ಗೆ ನಡೆದ ಈ ತರಬೇತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ “ಜೀವರಕ್ಷಕ “ ದ ಸೀನಿಯರ್ ತರಬೇತುದಾರ ಹಾಗೂ ಕೆವಿಜಿ ಮೆಡಿಕಲ್ ಕಾಲೇಜಿನ ಪ್ರೊಫೆಸರ್ ರೊ. ಡಾ. ಭರತ್ ಶೆಟ್ಟಿ ತರಬೇತಿ ನೀಡಿದರು. ಸಹ ತರಬೇತುದಾರರಾಗಿ ಡಾ ಪೃಥ್ವಿಕ್ ಮತ್ತು ಡಾ ಯುವರಾಜ್ ಸಹಕರಿಸಿದರು. ರೋಟರಿ ಕ್ಲಬ್ ಅಧ್ಯಕ್ಷೆ ಯೋಗಿತ ಗೋಪಿನಾಥ್ ಅಧ್ಯಕ್ಷತೆ ವಹಿಸಿದ್ದರು.

ರೋಟರಿ ಕ್ಲಬ್ ಜೋನ್ ಐದರ ಝೋನಲ್ ಲೆಫ್ಟಿನೆಂಟ್ ರೊ ಪ್ರಭಾಕರನ್ ನಾಯರ್ ಎಲ್ಲರಿಗೂ ಶುಭ ಹಾರೈಸಿದರು. ಕ್ಲಬ್ ನ ಖಜಾಂಚಿ ರೊ ಹರಿರಾಯ ಕಾಮತ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ರೊ ಗೋಪಿನಾಥ್ ಎಂ.ಪಿ ಉಪಸ್ಥಿತರಿದ್ದರು. ಐಕ್ಯೂಎಸಿ ಕೋರ್ಡಿನೇಟರ್ ಡಾ ಜಯಶ್ರೀ ಹಾಗೂ ವೈ ಆರ್ ಸಿ ಪ್ರೋಗ್ರಾಂ ಆಫೀಸರ್ ಶ್ರೀ ಉದಯಶಂಕರ್ ಹೆಚ್ ಮತ್ತು ವೈ ಆರ್ ಸಿ ಪ್ರೋಗ್ರಾಂ ಅಸಿಸ್ಟೆಂಟ್ ಆಫೀಸರ್ ಶ್ರೀಮತಿ ಸುರೇಖಾ ಹೆಚ್ ಶುಭ ಹಾರೈಸಿದರು. ಯುವ ರೆಡ್ ಕ್ರಾಸ್ ಸದಸ್ಯರುಗಳಾದ ನವ್ಯಶ್ರೀ ಪ್ರಾರ್ಥಿಸಿದರು. ಲೀಲಾವತಿ ಸ್ವಾಗತಿಸಿ, ಪ್ರಶಾಂತ್ ಕೆ ಎಲ್ಲರಿಗೂ ವಂದಿಸಿದರು. ಯುವರಾಜ್ ಬಿ.ಎಸ್ ಕಾರ್ಯಕ್ರಮ ನಿರೂಪಿಸಿದರು.