ಅರಣ್ಯ ಇಲಾಖೆ ರಾಷ್ಟ್ರೀಯ ಕ್ರೀಡಾ ಕೂಟ : ಬೀಟ್ ಫಾರೆಸ್ಟರ್ ಹೇಮಂತ್ ಡಿ.ಪಿ.ಯವರಿಗೆ ಗೋಲ್ಡ್ ಮೆಡಲ್

0

ಅ.16ರಿಂದ 20ರ ವರೆಗೆ ಛತ್ತೀಸ್ಗಢದ ರಾಯ್ ಪುರದಲ್ಲಿ ನಡೆದ ಆಲ್ ಇಂಡಿಯಾ ಫಾರೆಸ್ಟ್ ಕ್ರೀಡಾ ಕೂಟದಲ್ಲಿ ಬೆಳ್ತಂಗಡಿ ಅರಣ್ಯ ಇಲಾಖೆಯ ಫಾರೆಸ್ಟರ್ ಹೇಮಂತ್ ಡಿ.ಪಿ. ಯವರಿಗೆ ಗೋಲ್ಡ್ ಮೆಡಲ್ ಲಭಿಸಿದೆ.

45 ರಿಂದ 53 ವಯೋಮಾನದವರ ವಿಭಾಗದಲ್ಲಿ 200 ಮೀಟರ್ ಓಟದಲ್ಲಿ ಪ್ರಥಮದೊಂದಿಗೆ ಚಿನ್ನದ ಪದಕ, 4*100 ರಿಲೇ ಯಲ್ಲಿ ಬೆಳ್ಳಿ, 100 ಮೀ ಓಟ ಹಾಗೂ ಲಾಂಗ್ ಜಂಪ್ ನಲ್ಲಿ 4 ನೇ ಸ್ಥಾನ ಪಡೆದಿದ್ದಾರೆ.

ಕಡಬದ ನೆಲ್ಯಾಡಿಯಲ್ಲಿ ನೆಲೆಸಿರುವ ಇವರು, ಚೆಂಬು ಗ್ರಾಮದ ದಬ್ಬಡ್ಕ ಪುಟ್ಟಪ್ಪ – ತಾರಾಮಣಿ ದಂಪತಿಗಳ ಪುತ್ರ.