ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಹಾಗೂ ಸಿಬ್ಬಂದಿ ವರ್ಗದವರ ಜಂಟಿ ಆಶ್ರಯದಲ್ಲಿ ಜಿಲ್ಲಾ ಮಟ್ಟದ ಕಿರಿಯ ಬಾಲಕ ಮತ್ತು ಬಾಲಕಿಯರ ಹಾಗೂ 16 ವರುಷ ಮೇಲ್ಪಟ್ಟ ಮುಕ್ತ ರ್‍ಯಾಪಿಡ್ ಚೆಸ್ ಪಂದ್ಯಾಟ ಮತ್ತು ಮುಕ್ತ ಡಬಲ್ಸ್ ಕೇರಂ ಪಂದ್ಯಾಟ ಉತ್ಕರ್ಷ ಸಹಕಾರ ಟ್ರೋಫಿ -2024 ನ.1 ರಂದು ಮುಂಜಾನೆಯಿಂದ ರಾತ್ರಿ ತನಕ ನಿಗದಿತ ಸಮಯದಲ್ಲಿ ಸಂಘದ ಕಲ್ಲೇಗ ಪೂವಣಿ ಹೆಗ್ಡೆ ಸಭಾ ಭವನದಲ್ಲಿ ನಡೆಯಲಿದೆ.
ಕೇರಂ ಪಂದ್ಯಾಟ ರೂ 2000(ಪ್ರ), ರೂ.1500(ದ್ವಿ), ರೂ.750(ತೃ),ರೂ.750(ಚ) .ಚೆಸ್ ಪಂದ್ಯಾಟ ವಯೋಮಿತಿ ಅಂಡರ್ 8,10,12,14,16 ಬಾಲಕರ ವಿಭಾಗ ರೂ 555(ಪ್ರ), ರೂ.333(ದ್ವಿ), ರೂ.222(ತೃ).ಚತುರ್ಥ ಮತ್ತು ಪಂಚಮ ಶಾಶ್ವತ ಫಲಕ, ಪ್ರಶಸ್ತಿ ಪತ್ರ.
ಬಾಲಕಿಯರ ವಿಭಾಗ ರೂ 555(ಪ್ರ), ರೂ.333(ದ್ವಿ), ರೂ.222(ತೃ) ಚತುರ್ಥ ಮತ್ತು ಪಂಚಮ ಶಾಶ್ವತ ಫಲಕ, ಪ್ರಶಸ್ತಿ ಪತ್ರ.
16 ವರ್ಷ ಮೇಲ್ಪಟ್ಟ ಮುಕ್ತ ವಿಭಾಗ ರೂ 2500(ಪ್ರ), ರೂ.2000(ದ್ವಿ), ರೂ.1500(ತೃ),ರೂ.1000(ಚ),ರೂ.750(ಪ) ಮತ್ತು ಎಲ್ಲಾ ನಗದು ಬಹುಮಾನದೊಂದಿಗೆ ಶಾಶ್ವತ ಫಲಕ, ಪ್ರಶಸ್ತಿ ಪತ್ರ ಒಳಗೊಂಡಿರುತ್ತದೆ.
ಅತ್ಯುತ್ತಮ ಮಹಿಳಾ ಮತ್ತು ಹಿರಿಯ ಆಟಗಾರರಿಗೆ ರೂ.500 ಮತ್ತು ಪ್ರಶಸ್ತಿ ಪತ್ರ ಇರುತ್ತದೆ. ಸ್ಪರ್ಧಿಗಳು ಅ.30 ರ ಒಳಗೆ ಹೆಸರು ನೋಂದಾಯಿಸ ಬೇಕು.
ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿವೃತ್ತ ಉಪ ಕಾರ್ಯ ನಿರ್ವಹಣಾಧಿಕಾರಿ ಪರಮೇಶ್ವರ ಗೌಡ ಬಿಳಿಮಲೆ ಉದ್ಘಾಟಿಸಲಿದ್ದಾರೆ, ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಗಣೇಶ್ ಪೈ ಸಭಾಧ್ಯಕ್ಷತೆ ವಹಿಸಲಿದ್ದಾರೆ.
ಅತಿಥಿಗಳಾಗಿ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಎಸ್ ಎನ್ ಮನ್ಮಥ , ಸುಳ್ಯ ಸುದ್ದಿ ಚಾನೆಲ್ ಮುಖ್ಯಸ್ಥ ದುರ್ಗಾಕುಮಾರ್ ನಾಯರ್ ಕೆರೆ , ರಾಜ್ಯ ಚೆಸ್ ಅಸೋಸಿಯೇಶನ್ ಬೆಂಗಳೂರು ಉಪಾಧ್ಯಕ್ಷ ರಮೇಶ್ ಕೋಟೆ ಉಪಸ್ಥಿತರಿರುವರು.
ಬಹುಮಾನ ವಿತರಣಾ ಸಮಾರಂಭದಲ್ಲಿ ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಕೆ ರಘುನಾಥ ರೈ ಕೆರೆಕ್ಕೋಡಿ ಸಭಾಧ್ಯಕ್ಷತೆ ವಹಿಸಲಿದ್ದಾರೆ. ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನೇಮಿರಾಜ ಪಲ್ಲೋಡಿ, ಚೆಸ್ ಸಂಘಟಕ ಮಹೇಶ್ ಕೋಟೆ , ಜೇಸಿಐ ಪಂಜ ಪಂಚಶ್ರೀ ಪೂರ್ವಾಧ್ಯಕ್ಷ ಸೋಮಶೇಖರ ನೇರಳ ಗೌರವ ಉಪಸ್ಥಿತರಿರುವರು.