ಕರ್ನಾಟಕ ಪಬ್ಲಿಕ್ ಸ್ಕೂಲ್ ಬೆಳ್ಳಾರೆ ಇದರ ಪ್ರಾಥಮಿಕ ವಿಭಾಗದ ವಿದ್ಯಾರ್ಥಿಗಳಿಗೆ ಯಂತ್ರದ ಮೂಲಕ ಭತ್ತ ಕಟಾವು ಮಾಡುವುದನ್ನು ವೀಕ್ಷಿಸುವ ಅವಕಾಶವೂ ದೊರೆಯಿತು. ಸ್ಥಳೀಯ ಪ್ರಗತಿಪರ ಕೃಷಿಕ ಶುಭಕರ ರೈ ಅವರು ತಮ್ಮ ಗದ್ದೆಯಲ್ಲಿ ಭತ್ತವನ್ನು ಪ್ರತಿವರ್ಷವೂ ಬೆಳೆಯುತ್ತಿದ್ದು, ಈ ವರ್ಷದ ಬೆಳೆಯ ಕಟಾವು ಕಾರ್ಯವನ್ನು ಯಂತ್ರದ ಮೂಲಕ ನಡೆಸುತ್ತಿದ್ದರು. ಈ ಸಂದರ್ಭದಲ್ಲಿ ಕೆಪಿಎಸ್ ಬೆಳ್ಳಾರೆ ಪ್ರಾಥಮಿಕ ಶಾಲಾ ವಿಭಾಗದ ವಿದ್ಯಾರ್ಥಿಗಳನ್ನು ಈ ಕಟಾವು ಕಾರ್ಯ ವೀಕ್ಷಿಸ ವೀಕ್ಷಿಸಲು ಅವಕಾಶ ಮಾಡಿಕೊಡಲಾಯಿತು. ಮುಖ್ಯ ಗುರುಗಳಾದ ಮಾಯಲಪ್ಪ ಜಿ ಸಹ ಶಿಕ್ಷಕರಾದ ಅಧಿನೇಶ ದಿನೇಶ್ ಮಾಚಾರ್, ಶಿಕ್ಷಕಿಯರಾದ ರಮ್ಯಾಶ್ರೀ, ಚಂದ್ರಕಲಾ, ಇಳಾಶ್ರೀ ಮತ್ತು ತೃಪ್ತಿ ಇವರಗಳು ವಿದ್ಯಾರ್ಥಿಗಳನ್ನು ಕಟಾವಿನ ಗದ್ದೆಗೆ ಕರೆದುಕೊಂಡು ಹೋಗಿ ಕಟಾವು ವೀಕ್ಷಿಸುವಂತೆ ಮಾರ್ಗದರ್ಶನ ನೀಡಿದರು.
ಈ ಸಂದರ್ಭದಲ್ಲಿ ಕೃಷಿಕರಾದ ಶುಭಕರ ರೈಯವರು ವಿದ್ಯಾರ್ಥಿಗಳಿಗೆ ಕಟಾವಿನ ಬಗ್ಗೆ ಮಾಹಿತಿಯನ್ನು ನೀಡಿದರು. ಆಧುನಿಕ ತಂತ್ರಜ್ಞಾನದ ಮೂಲಕ ಭತ್ತದ ಕೃಷಿಯನ್ನು ಮಾಡುವುದರಿಂದ ಆಗುವ ಅನುಕೂಲಗಳು ಇವುಗಳ ಬಗ್ಗೆ ವಿವರಿಸಿದರು. ವಿದ್ಯಾರ್ಥಿಗಳು ಭತ್ತ ಕಟಾವು ಆಗಿ ಹುಲ್ಲಿಂದ ಬೇರ್ಪಟ್ಟು ಹುಲ್ಲು ಗದ್ದೆಗೆ ಬೀಳುವುದು ಮತ್ತು ಯಂತ್ರದಲ್ಲಿ ಭತ್ತವು ತುಂಬುವುದು,ಯಂತ್ರದಲ್ಲಿ ಪೂರ್ತಿ ಭಕ್ತ ತುಂಬಿದ ತಕ್ಷಣ ಅದನ್ನು ಮನೆಯ ಅಂಗಳಕ್ಕೆ ತಂದು ಇಳಿಸುವುದು ಇವುಗಳನ್ನು ಮಕ್ಕಳು ವೀಕ್ಷಿಸಿದರು.