ಪಂಜದಲ್ಲಿ ಉತ್ಕರ್ಷ ಟ್ರೋಫಿ ಚೆಸ್ ಮತ್ತು ಕೇರಂ ಪಂದ್ಯಾಟ ಉದ್ಘಾಟನೆ

0

⬆️ ಮಾನಸಿಕ ಆರೋಗ್ಯಕ್ಕೆ ಚೆಸ್, ಕೇರಂ ಆಟ : ಪರಮೇಶ್ವರ ಬಿಳಿಮಲೆ

⬆️ ರಾಜ್ಯ ರಾಷ್ಟ್ರ ಮಟ್ಟದಲ್ಲಿ ಮೂಡಿ ಬರಲಿ: ಎಸ್ ಎನ್ ಮನ್ಮಥ

⬆️ ಬೌದ್ಧಿಕ ವಿಕಸನಗೊಳಿಸುವ ಕ್ರೀಡೆ : ನಾಯರ್ ಕೆರೆ

⬆️ ಕೃಷಿ ಪತ್ತಿನ ಸಂಘದ ಈ ಕಾರ್ಯಕ್ರಮ ಜಿಲ್ಲೆಯ ಇತಿಹಾಸದಲ್ಲಿಯೇ ಪ್ರಥಮ: ಕೋಟೆ

ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಹಾಗೂ ಸಿಬ್ಬಂದಿ ವರ್ಗದವರ ಜಂಟಿ ಆಶ್ರಯದಲ್ಲಿ ಜಿಲ್ಲಾ ಮಟ್ಟದ ಕಿರಿಯ ಬಾಲಕ ಮತ್ತು ಬಾಲಕಿಯರ ಹಾಗೂ 16 ವರುಷ ಮೇಲ್ಪಟ್ಟ ಮುಕ್ತ ರ್‍ಯಾಪಿಡ್ ಚೆಸ್ ಪಂದ್ಯಾಟ ಮತ್ತು ಮುಕ್ತ ಡಬಲ್ಸ್ ಕೇರಂ ಪಂದ್ಯಾಟ ಉತ್ಕರ್ಷ ಸಹಕಾರ ಟ್ರೋಫಿ -2024 ಇಂದು ಉದ್ಘಾಟನೆ ಗೊಂಡಿತು.

ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿವೃತ್ತ ಉಪ ಕಾರ್ಯ ನಿರ್ವಹಣಾಧಿಕಾರಿ ಪರಮೇಶ್ವರ ಗೌಡ ಬಿಳಿಮಲೆ ಉದ್ಘಾಟಿಸಿ ಮಾತನಾಡಿ. “
ಒಳಾಂಗಣ ಆಟ ಕೇರಂ,ಚೆಸ್. ಆಲೋಚನೆ, ಯೋಜನೆ ಸಾಮರ್ಥ್ಯ ಹೆಚ್ಚಿಸುವ ಜನಪ್ರಿಯ ಆಟ. ಇದು ಆಟ ಮಾತ್ರವಲ್ಲ ಕಲೆ, ವಿಜ್ಞಾನ, ಯುದ್ದ ಕಲೆ ಮಾನಸಿಕ ಆರೋಗ್ಯಕ್ಕೆ ಕಾರಣವಾಗುತ್ತದೆ.” ಎಂದು ಹೇಳಿದರು.

ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಗಣೇಶ್ ಪೈ ಸಭಾಧ್ಯಕ್ಷತೆ ವಹಿಸಲಿದ್ದರು.

ಅತಿಥಿಯಾಗಿದ್ದ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಎಸ್ ಎನ್ ಮನ್ಮಥ ಮಾತನಾಡಿ , ಪಂಜದಲ್ಲಿ ಆಯೋಜಿಸಿದ ಪಂದ್ಯಾಟದಿಂದ ಹೊರ ಹೊಮ್ಮಿದ ಪ್ರತಿಭೆಗಳು . ಮುಂದಿನ ದಿನ ರಾಜ್ಯ ರಾಷ್ಟ್ರ ಮಟ್ಟದಲ್ಲಿ ಮೂಡಿ ಬರಲಿ.”.ಎಂದು ಹೇಳಿದರು.

ಅತಿಥಿಯಾಗಿದ್ದ ಸುಳ್ಯ ಸುದ್ದಿ ಚಾನೆಲ್ ಮುಖ್ಯಸ್ಥ ದುರ್ಗಾಕುಮಾರ್ ನಾಯರ್ ಕೆರೆ ಮಾತನಾಡಿ “ಏಕಾಗ್ರತೆ ಮೂಡಿಸುವ, ಐಕ್ಯೂ ವೃದ್ಧಿಸುವ, ನಿರ್ಧಾರ ತೆಗೆದುಕೊಳ್ಳುವ ಶಕ್ತಿ ಬರಿಸುವ ಚೆಸ್, ಕೇರಂ ನಂತಹ ಕ್ರೀಡೆಗಳಿಂದ ಬೌಧ್ಧಿಕ ವಿಕಸನ ಸಾಧ್ಯವಾಗುತ್ತದೆ”. ಎಂದರು.

ಅತಿಥಿ ರಾಜ್ಯ ಚೆಸ್ ಅಸೋಸಿಯೇಶನ್ ಬೆಂಗಳೂರು ಉಪಾಧ್ಯಕ್ಷ ರಮೇಶ್ ಕೋಟೆ ಮಾತನಾಡಿ. “ಗ್ರಾಮೀಣ ಪ್ರದೇಶದ ಕೃಷಿ ಪತ್ತಿನ ಸಹಕಾರ ಸಂಘ ಮತ್ತು ಸಿಬ್ಬಂದಿಗಳು ಚೆಸ್ ಕೇರಂ ಪಂದ್ಯಾಟ ಇಷ್ಟು ದೊಡ್ಡ ಮಟ್ಟದಲ್ಲಿಆಯೋಜಿಸಿರುವುದು ಎಲ್ಲಿಯೂ ಜಿಲ್ಲೆಯ ಇತಿಹಾಸದಲ್ಲಿಯೇ ಇಲ್ಲ. ಚೆಸ್ ಕಲಿತ ಮಕ್ಕಳ ಪ್ರತಿಭೆ ಹೊರ ತರಲು ಈ ಪಂದ್ಯಾಟ ಮುಖ್ಯ ಪಾತ್ರ ವಹಿಸುತ್ತದೆ. “ಎಂದು ಹೇಳಿದರು
ಸಂಘದ ನಿರ್ದೇಶಕರಾದ ಚಂದ್ರಶೇಖರ ಶಾಸ್ತ್ರಿ, ಸುಬ್ರಹ್ಮಣ್ಯ ಕುಳ, ಶ್ರೀಕೃಷ್ಣ ಭಟ್ ಪಟೋಳಿ, ಚಿನ್ನಪ್ಪ ಗೌಡ ಚೊಟ್ಟೆಮಜಲು, ವಾಚಣ್ಣ ಕೆರೆಮೂಲೆ,ಕಿಟ್ಟಣ್ಣ ಪೂಜಾರಿ ,ಪಂದ್ಯಾಟದ ಸಂಘಟಕ, ಸಂಘದ ಸಿಬ್ಬಂದಿ ಕೇಶವ ಕೆರೆಮೂಲೆ, ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನೇಮಿರಾಜ ಪಲ್ಲೋಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಇದೇ ವೇಳೆ ಸಂಘದ ವತಿಯಿಂದ ಸ್ಥಳೀಯ ಶಾಲೆಗಳಿಗೆ ರಾಮಾಯಣ ಹಕ್ಕಿನೋಟ ಪುಸ್ತಕ ವಿತರಣೆ ನಡೆಯಿತು.

ಕಾರ್ಯಕ್ರಮದಲ್ಲಿಸುಮಾ ಕೋಟೆ ಪ್ರಾರ್ಥಿಸಿದರು . ಸಂಘದ ಸಿಬ್ಬಂದಿ ಚಂದ್ರಶೇಖರ ಇಟ್ಯಡ್ಕ ನಿರೂಪಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ನೇಮಿರಾಜ ಪಲ್ಲೋಡಿ ಸ್ವಾಗತಿಸಿದರು. ಸುಮಾ ಕೋಟೆ ಮತ್ತು ಸುಧಾ ಕೋಟೆ ನಾಡ ಗೀತೆ ಹಾಡಿದರು. ಸಂಘದ ಉಪ ಕಾರ್ಯ ನಿರ್ವಹಣಾಧಿಕಾರಿ ಲೋಹಿತ್ ಎಣ್ಣೆಮಜಲು ವಂದಿಸಿದರು.

ಚೆಸ್ ಪಂದ್ಯಾಟದಲ್ಲಿ ಚೆಸ್ ಪಂದ್ಯಾಟದಲ್ಲಿ 188 ಹಾಗೂ ಕೇರಂ ಪಂದ್ಯಾಟದಲ್ಲಿ 58 ಸ್ಪರ್ಧಿಗಳು ಭಾಗವಹಿಸಿದ್ದು ದಾಖಲೆಯಾಗಿದೆ.