ನ.15 ಕಸ್ತೂರಿ ರಂಗನ್ ವರದಿಯ ವಿರುದ್ಧ ಗುಂಡ್ಯದಲ್ಲಿ ಬೃಹತ್ ಪ್ರತಿಭಟನಾ ಸಭೆ

0

ಕಸ್ತೂರಿರಂಗನ್ ವರದಿಯನ್ನು ಕೇಂದ್ರ ಮತ್ತು ರಾಜ್ಯ ಸರಕಾರಗಳು ಸಂಪೂರ್ಣವಾಗಿ ಕೈಬಿಟ್ಟು ಪಶ್ಚಿಮ ಘಟ್ಟ ಮತ್ತು ಜನವಸತಿ ಪ್ರದೇಶಕ್ಕೆ ಗಡಿ ಗುರುತು ಮಾಡಬೇಕು ,ಕೃಷಿ ಭೂಮಿ ಹಾಗೂ ಅರಣ್ಯ ಭೂಮಿಯ ನಡುವೆ ಆನೆ ಕಂದಕ ನಿರ್ಮಾಣವಾಗಬೇಕು, ಕಂದಾಯ ಮತ್ತು ಅರಣ್ಯ ಇಲಾಖೆಯವರು ಜಂಟಿ ಸರ್ವೆ ನಡೆಸಬೇಕು ,ರೈತರಿಗೆ ಕೋವಿ ಪರವಾನಿಗೆ ನೀಡಬೇಕು ಎಂದು ಒತ್ತಾಯಿಸಿ ನ.15ರಂದು ಗುಂಡ್ಯದಲ್ಲಿ ಕಸ್ತೂರಿ ರಂಗನ್ ವರದಿಯ ವಿರುದ್ಧ ಬೃಹತ್ ಪ್ರತಿಭಟನಾ ಸಭೆಯನ್ನು ನಡೆಸಲಾಗುವುದೆಂದು ಮಲೆನಾಡು ಜನ ಹಿತ ರಕ್ಷಣಾ ವೇದಿಕೆ ಯ ಸಂಚಾಲಕ ಕಿಶೋರ್ ಶಿರಾಡಿ ಸುಬ್ರಹ್ಮಣ್ಯದಲ್ಲಿ ಪತ್ರಿಕಾಗೋಷ್ಠಿಯಲ್ಲಿ ನ.4 ರಂದು ತಿಳಿಸಿದರು.


ಮಲೆನಾಡು ಹಿತರಕ್ಷಣ ಜನ ಹಿತ ರಕ್ಷಣಾ ವೇದಿಕೆಯು ಪರಿಸರ ಸಂರಕ್ಷಣೆಯ ನೆಪದಲ್ಲಿ 2011 ರಿಂದ ರೈತರಿಗೆ ಸಮಸ್ಯೆ ಆಗುವ ಯೋಜನೆಗಳ ವಿರುದ್ಧ ನಿರಂತರ ಹೋರಾಟ ಮಾಡಿಕೊಂಡು ಬಂದಿದೆ .ಪುಷ್ಪಗಿರಿ ವನ್ಯ ಧಾಮಕ್ಕೆ ದಕ್ಷಿಣ ಕನ್ನಡ ಜಿಲ್ಲೆಯ 48 ಗ್ರಾಮಗಳನ್ನು ಸೇರಿಸಲು ಸರಕಾರ ನಿರ್ಣಯ ಮಾಡಿದಾಗ ಸಂಘಟನೆಯು ಪಕ್ಷಾತೀತವಾಗಿ, ಜಾತ್ಯತೀತ, ಕಾನೂನಾತ್ಮಕ ಹೋರಾಟ ಮಾಡಿ ಅದನ್ನ ತಡೆಹಿಡಿಯುವುದರಲ್ಲಿ ಯಶಸ್ಸು ಕಂಡಿದೆ. ಕಸ್ತೂರಿ ರಂಗನ್ ವರದಿಯ ಬಗ್ಗೆ ಅಧಿಕಾರಿಗಳ ಮಟ್ಟದಲ್ಲಿ ವರದಿ ಸಂಗ್ರಹ ಮಾಡಿದಾಗ ಅದನ್ನು ವಿರೋಧಿಸಿ ಸಂಘಟನೆಯ ಹೋರಾಟದ ಫಲವಾಗಿ ವಿಶೇಷ ಗ್ರಾಮ ಸಭೆ ಕರೆಯಲು ಸರಕಾರ ತೀರ್ಮಾನಿಸಿತು. ನಂತರ ಬಂದಿರುವ ಯೋಜನೆಗಳಿಂದ ಹುಲಿ ಸಂರಕ್ಷಣೆ ,ಯುನೆಸ್ಕೋ ಗ್ರೇಟರ್ ತಲಕಾವೇರಿ ,ಆನೆ ಕಾರಿಡಾರ್, ಮೆಡಿಕಲ್ ಪ್ಲಾಂಟೇಶನ್ ,ಮಾದವ ಗಾಡ್ ಗಿಲ್ ವರದಿ ,ಕಸ್ತೂರಿ ರಂಗನ್ ವರದಿ ,ಜೀವ ವೈವಿಧ್ಯತೆ, ಸಂರಕ್ಷಣೆ, ಈ ರೀತಿ ಅರಣ್ಯ ಸಂರಕ್ಷಣಾ ನೆಪದಲ್ಲಿ ರೈತರಿಗೆ ಮಾನಸಿಕ ಹಿಂಸೆ ನೀಡುವ ಅನೇಕ ಯೋಜನೆ ಬಂದಾಗ ಸಂಘಟನೆಯು ನಿರಂತರ ಹೋರಾಟ ಮಾಡುತ್ತಲೇ ಬಂದಿದೆ.


ಕೇಂದ್ರ ಪರಿಸರ ಇಲಾಖೆ ಕಸ್ತೂರಿರಂಗನ್ ವರದಿಯನ್ನು ಅನುಷ್ಠಾನಕ್ಕೆ ಅಭಿಪ್ರಾಯ ಅನೇಕ ಬಾರಿ ಕೇಳಿದಾಗ ಪಕ್ಷಾತೀತವಾಗಿ ರಾಜ್ಯ ಸರಕಾರ ಕಸ್ತೂರಿರಂಗನ ವರದಿ ಬೇಡ ಎಂದು ವರದಿ ಮಂಡಿಸಿದೆ ಆದರೂ ವರದಿಯ ಅಭಿಪ್ರಾಯಕ್ಕೆ ಕೇಂದ್ರ ಪರಿಸರ ಇಲಾಖೆ ಕಳುಹಿಸುತ್ತಾ ಇದೆ ಆದುದರಿಂದ ಶಾಶ್ವತ ಪರಿಹಾರ ಗೋಸ್ಕರ ಗುಂಡ್ಯದಲ್ಲಿ ನಡೆಯುವ ಪ್ರತಿಭಟನೆಗೆ ಕಡಬ ತಾಲೂಕು ಸುಳ್ಯ ತಾಲೂಕು ಬೆಳ್ತಂಗಡಿ ತಾಲೂಕಿನ ಭಾದಿತ ಗ್ರಾಮ ಮತ್ತು ಸೇರಿರುವ ಗ್ರಾಮದ ಗಡಿಯಿಂದ 10 ಕಿ.ಮೀ ದೂರದ ಗ್ರಾಮದವರಿಗೆ ಈ ಕಾನೂನು ಅನ್ವಯಿಸುವುದರಿಂದ ತಾವುಗಳು ಎಲ್ಲರೂ ಮನೆ ಮಂದಿ ಭಾಗವಹಿಸಬೇಕಾಗಿ ಕಿಶೋರ್ ಶಿರಾಡಿ ವಿನಂತಿ ಮಾಡಿಕೊಂಡರು. ಕಡಬ ತಾಲೂಕು ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಸೈಯದ್ ಮೀರಾ ಸಾಹೇಬ್ ಮಾತನಾಡಿ ಕೇಂದ್ರ ಸರಕಾರದ ಆದೇಶ ಕಸ್ತೂರಿ ರಂಗನ್ ವರದಿಯ ಬಗ್ಗೆ ಇದ್ದರೆ ರಾಜ್ಯ ಸಹಕಾರ ಮುತುವರ್ಜಿ ವಹಿಸಿ ಅದನ್ನ ವಿರೋಧಿಸಿ ರೈತರಿಗೆ ತೊಂದರೆ ಆಗುತ್ತಿರುವುದರಿಂದ ಅದನ್ನ ತಿರಸ್ಕರಿಸಬೇಕು ಎಂದರು.

ಸುದ್ದಿಗೋಷ್ಠಿಯಲ್ಲಿ ಮಲೆನಾಡು ಜನಹಿತ ರಕ್ಷಣಾ ವೇದಿಕೆ ಉಪಾಧ್ಯಕ್ಷ ಅಚ್ಚುತ ಗೌಡ ಸುಬ್ರಹ್ಮಣ್ಯ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಸೈಯದ್ ಮೀರಾ ಸಾಹೇಬ್ ಕಡಬ, ದಾಮೋದರ ಗುಂಡ್ಯ, ಸೋಮ ಸುಂದರ ಕೂಜುಗೋಡು, ಅಶೋಕ ಕುಮಾರ ಮೂಲೆ ಮಜಲು ,ಈಶ್ವರ ಗೌಡ ಆರಂಪಾಡಿ ಮುಂತಾದವರು ಹಾಜರಿದ್ದರು.