ಅರಂತೋಡು ಸ್ವರಲಯ ಸಿಂಗಾರಿಮೇಳ ಇದರ ನೂತನ ತಂಡದ ಉದ್ಘಾಟನೆ ಮತ್ತು ರಂಗ ಪ್ರವೇಶ ಕಾರ್ಯಕ್ರಮ ನ.3ರಂದು ಶ್ರೀ ಮಲ್ಲಿಕಾರ್ಜುನ ದೇವಸ್ಥಾನ ತೊಡಿಕಾನದಲ್ಲಿ ನಡೆಯಿತು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅರಂತೋಡು ತೊಡಿಕಾನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ಸಂತೋಷ್ ಕುತ್ತಮೊಟ್ಟೆಯವರು ವಹಿಸಿದ್ದರು.
ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ಅರಂತೋಡು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಕೇಶವ ಅಡ್ತಲೆಯವರು ನೆರವೇರಿಸಿ ಮಾತನಾಡಿ “ನಮ್ಮ ಪಂಚಾಯತ್ ವ್ಯಾಪ್ತಿಯಲ್ಲಿ ಪ್ರಪ್ರಥಮವಾಗಿ ಕೇರಳ ಶೈಲಿಯ ಸಿಂಗಾರಿಮೇಳ ಆರಂಭಗೊಳ್ಳುತಿರುವುದು ಸಂತಸದ ವಿಚಾರ. ಮುಂದಿನ ದಿನಗಳಲ್ಲಿ ತಮ್ಮ ತಂಡಕ್ಕೆ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿ ತಂಡದ ಸಾಧನೆಯನ್ನು ಶ್ಲಾಘಿಸಿದರು.
ಇನ್ನೊರ್ವ ಮುಖ್ಯ ಅತಿಥಿಗಳಾದ ತೊಡಿಕಾನ ಮಲ್ಲಿಕಾರ್ಜುನ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಯು. ಎಂ. ಕಿಶೋರ್ ಕುಮಾರ್‌ರವರು ಮಾತನಾಡಿ ತಂಡವು ಮುಂದಿನ ದಿನಗಳಲ್ಲಿ ಆರ್ಥಿಕ ಲಾಭಗಿಂತಲೂ ಮಿಗಿಲಾಗಿ ಸೇವಾ ಮನೋಭಾವ ಮೈಗೂಡಿಸಿಕೊಂಡು ಉತ್ತಮ ತಂಡವಾಗಿ ಮೂಡಿ ಬರಲಿ ಎಂದು ಶುಭ ಹಾರೈಸಿ ತಂಡದ ಕಾರ್ಯಕ್ಕೆ ಶ್ಲಾಘನೆ ವ್ಯಕ್ತ ಪಡಿಸಿದರು. ಅಧ್ಯಕ್ಷತೆ ವಹಿಸಿದ್ದ ಸಂತೋಷ್ ಕುತ್ತಮೊಟ್ಟೆಯವರು ಮಾತನಾಡಿ ತಂಡದ ರೂವಾರಿ ಗೋಪಾಲಕೃಷ್ಣ ಕಾಟೂರುರವರು ಹಲವು ವರುಷಗಳ ಹಿಂದೆಯೆ ನಮ್ಮೂರಿನಲ್ಲಿ ಸಿಂಗಾರಿಮೇಳ ಆರಂಭಿಸಬೇಕು ಎಂಬ ಕನಸು ಕಂಡು ನಿರಂತರ ಪರಿಶ್ರಮ ದಿಂದ ನನಸಾಗಿಸಿದ್ದಾರೆ. ಮುಂದಿನ ದಿನಗಳಲ್ಲಿ ನಮ್ಮ ಸಹಕಾರಿ ಸಂಘವು ಸಂಪೂರ್ಣ ಸಹಕಾರ ನೀಡಲಿದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ತರಬೇತಿದಾರರದ ರಾಜೇಶ್ ಪಾಂಡಿ ಮತ್ತು ಶರತ್ ಪಾಂಡಿಯವರನ್ನು ಸನ್ಮಾನಿಸಲಾಯಿತು. ಕುಮಾರಿ ರಶ್ಮಿ ಕಾಟೂರುರವರು ಪ್ರಾರ್ಥನೆಗೈದರು, ಕುಸುಮಾಧರ ಕೆ. ಪಿ ಯವರು ಸ್ವಾಗತಿಸಿದರು.
ಪ್ರಸಾದ್ ಕಾಟೂರುರವರು ಕಾರ್ಯಕ್ರಮ ನಿರೂಪಿಸಿ ಕುಮಾರಿ ಸುಶ್ಮಿತಾ ಬಿಳಿಯಾರು ವಂದನಾರ್ಪಣೆ ಗೈದರು.