ಸುಳ್ಯ ನಗರ ಪಂಚಾಯತ್ ನ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಶ್ರೀಮತಿ ಕಿಶೋರಿ ಶೇಟ್ ಆಯ್ಕೆಯಾಗಿದ್ದಾರೆ.
ಅಧ್ಯಕ್ಷತೆ ಕಿಶೋರಿ ಶೇಟ್ ರನ್ನು ಸದಸ್ಯೆ ಪ್ರವೀತಾ ಪ್ರಶಾಂತ್ ಸೂಚಿಸಿದರೆ, ಸದಸ್ಯ ಸುಧಾಕರ ಕುರುಂಜಿಭಾಗ್ ಅನುಮೋದಿಸಿದರು.
ಕಿಶೋರಿ ಶೇಟ್ ರವರು ಕಳೆದ ವರ್ಷ ಸ್ಥಾಯಿ ಸಮಿತಿ ಅಧ್ಯಕ್ಷ ರಾಗಿ ಆಯ್ಕೆಯಾಗಿದ್ದರು. ಆದರೆ ಅಧಿಕಾರ ವಹಿಸಿಕೊಂಡ ಕೆಲವೇ ತಿಂಗಳಲ್ಲಿ ಪಂಚಾಯತ್ ಅಧ್ಯಕ್ಷತೆಯ ಅವಧಿ ಪೂರ್ಣಗೊಂಡಿತ್ತು. ಆದ್ದರಿಂದ ಕಿಶೋರಿ ಶೇಟ್ ರಿಗೆ ಪೂರ್ಣವಧಿ ಅಧಿಕಾರ ಸಿಕ್ಕಿರಲಿಲ್ಲ. ಈ ಕಾರಣದಿಂದ ಇದೀಗ ಮತ್ತೆ ಕಿಶೋರಿ ಶೇಟ್ ರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಅಧ್ಯಕ್ಷೆ ಶಶಿಕಲಾ ನೀರಬಿದಿರೆ, ಉಪಾಧ್ಯಕ್ಷ ಬುದ್ದ ನಾಯ್ಕ್ ಹಾಗೂ ಪಂಚಾಯತ್ ಸದಸ್ಯರು ಉಪಸ್ಥಿತರಿದ್ದರು.