ನಗರದ ಕೆಲವು ಭಾಗಗಳಲ್ಲಿ ಪ್ರವಾಸೋದ್ಯಮ ಸ್ಥಳವಾಗಿ ಅಭಿವೃದ್ಧಿಗೊಳಿಸುವ ಬಗ್ಗೆ ಪಂಚಾಯತ್ ಅಧ್ಯಕ್ಷರು ಹಾಗೂ ಸದಸ್ಯರಿಗೆ ಎ.ಸಿ ಯವರಿಂದ ಸಲಹೆ
ಪುತ್ತೂರು ಉಪ ವಿಭಾಗಾಧಿಕಾರಿ ಜುಬಿನ್ ಮಹಾಪಾತ್ರ ರವರು ನ. 7 ರಂದು ಸುಳ್ಯದ ಐ ಬಿ ಗೆ ಭೇಟಿ ನೀಡಿ ನಗರ ಪಂಚಾಯತ್ ಅಧ್ಯಕ್ಷರು ಮತ್ತು ಸದಸ್ಯರೊಂದಿಗೆ ಸಮಾಲೋಚನೆ ಸಭೆ ನಡೆಸಿದ್ದಾರೆ.
ಈ ಸಂದರ್ಭದಲ್ಲಿ ನಗರ ಪಂಚಾಯತಿ ಸದಸ್ಯರುಗಳು ಸುಳ್ಯದ ವಿವಿಧ ಸಮಸ್ಯೆಗಳ ಬಗ್ಗೆ ಎ ಸಿ ಅವರ ಗಮನಕ್ಕೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಸದಸ್ಯರುಗಳ ಮನವಿಯನ್ನು ಆಲಿಸಿದ ಎ ಸಿ ಯವರು ಸುಳ್ಯ ನಗರ ಅಭಿವೃದ್ಧಿಗೆ ಸುಳ್ಯವನ್ನು ಒಂದು ಪ್ರವಾಸ ತಾಣವಾಗಿ ಮಾಡುವ ವಿವಿಧ ಯೋಜನೆಗಳ ಮಾಹಿತಿ ನೀಡಿದ್ದಾರೆ.
ಖಾಸಗಿ ಸಂಸ್ಥೆ,ಹಾಗೂ ಇತರ ಸಂಘ ಸಂಸ್ಥೆಗಳ ಸಹ ಬಾಗಿತ್ವದಲ್ಲಿ ಸುಳ್ಯದಲ್ಲಿ ವಾಟರ್ ಪಾರ್ಕ್, ಬೋಟಿಂಗ್, ಉಧ್ಯಾನವನ ಪ್ಲಾಸ್ಟಿಕ್ ಪಾರ್ಕ್, ಮುಂತಾದ ಟೂರಿಸ್ಟ್ ಪ್ಲೇಸ್ ನಿರ್ಮಾಣ ಮಾಡಿ ಸುಳ್ಯಕ್ಕೆ ಆದಾಯಗಳು ಬರುವ ರೀತಿಯಲ್ಲಿ ಮಾಡಬೇಕು.
ಇದಕ್ಕೆ ಸಂಭಂದಿಸಿದಂತೆ ಸರಕಾರಿ ಜಾಗವನ್ನು ಗುರುತಿಸುವ ಬಗ್ಗೆ ಸಲಹೆ ನೀಡಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.
ಸುಳ್ಯ ತಾಲೂಕು ಕಂದಾಯ ನಿರೀಕ್ಷಕ ಅವಿನ್ ರಂಗತಮಲೆ, ತಾಲೂಕು ಕಚೇರಿ ಸಿಬ್ಬಂದಿ ನಾರಾಯಣ,ನ ಪಂ ಮುಖ್ಯ ಅಧಿಕಾರಿ ಸುಧಾಕರ್ ಈ ಸಂಧರ್ಭದಲ್ಲಿ ಉಪಸ್ಥಿತರಿದ್ದರು.
ಸಭೆಯಲ್ಲಿ ನ ಪಂ ಅಧ್ಯಕ್ಷೆ ಶಶಿಕಲಾ ನೀರಬಿದಿರೆ, ಉಪಾಧ್ಯಕ್ಷ ಬುದ್ಧ ನಾಯ್ಕ್,ಸ್ಥಾಯಿ ಸಮಿತಿ ಅಧ್ಯಕ್ಷೆ ಕಿಶೋರಿ ಶೇಟ್, ನ ಪಂ ಸದಸ್ಯರುಗಳಾದ ವಿನಯ್ ಕುಮಾರ್ ಕಂದಡ್ಕ, ಕೆ ಎಸ್ ಉಮ್ಮರ್, ಶರೀಫ್ ಕಂಠಿ, ಶೀಲಾ ಕುರುಂಜಿ,ಶಿಲ್ಪಾ ಸುದೇವ್,ಸುಧಾಕರ್ ಕುರುಂಜಿ ಭಾಗ್,ಧೀರಾ ಕ್ರಾಸ್ತಾ ಮೊದಲಾದವರು ಭಾಗವಹಿಸಿದ್ದರು.