ಕೆ.ವಿ.ಜಿ. ಆಯುರ್ವೇದ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆ ಸುಳ್ಯ -ಪ್ರಥಮ ಬಿ.ಎ.ಎಂ.ಎಸ್ ಒರಿಯೇಂಟೆಶನ್ ಕಾರ್ಯಕ್ರಮ

0

ಕೆ.ವಿ.ಜಿ. ಆಯುರ್ವೇದ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆ ಸುಳ್ಯದಲ್ಲಿ ನ.8 ರಂದು ಪ್ರಥಮ ವರ್ಷದ ಬಿಎಎಂಎಸ್ ವಿದ್ಯಾರ್ಥಿಗಳ ಒರಿಯೇಂಟೆಶನ್ ಕಾರ್ಯಕ್ರಮ ಮತ್ತು ಏಪ್ರನ್ ವಿತರಣಾ ಕಾರ್ಯಕ್ರಮ ನೆರವೇರಿತು.


ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ಅಧ್ಯಕ್ಷರಾದ ಡಾ. ಕೆ.ವಿ. ಚಿದಾನಂದ ಇವರು ಸಮಾರಂಭವನ್ನು ಉದ್ಘಾಟಿಸಿ ವಿದ್ಯಾಭ್ಯಾಸದ ಪ್ರಾಮುಖ್ಯತೆ, ಆಯುರ್ವೇದದ ಜನಪ್ರಿಯತೆ, ಇಂದಿನ ಆಧುನಿಕ ಯುಗದಲ್ಲಿ ಪ್ರಾಚೀನ ಮತ್ತು ನವೀನ ವೈದ್ಯಕೀಯ ಪದ್ಧತಿ ಗಳನ್ನು ಸಮಯೋಚಿತವಾಗಿ ಬಳಸಿಕೊಂಡು ರೋಗಿಗಳ ಕ್ಷೇಮಕ್ಕಾಗಿ ಇರುವ ವಿಪುಲ ಅವಕಾಶಗಳನ್ನು ಹಾಗೂ ಈ ನಿಟ್ಟಿನಲ್ಲಿ ಸಾಗುವ ಅವರು ಕಾಲೇಜಿನ ಸ್ಥಾಪನೆಯಿಂದ ತೊಡಗಿ ಇಲ್ಲಿಯ ತನಕ ನಡೆದು ಬಂದ ದಾರಿ, ವೈದ್ಯಕೀಯ ಕ್ಷೇತ್ರದ ಮಹತ್ವ, ವೈದ್ಯರ ನಿಸ್ವಾರ್ಥ ಮನೋಭಾವದ ಸೇವೆ ಹಾಗೂ ಶಿಸ್ತಿನ ಬಗ್ಗೆ ವಿವರಿಸಿದರು. ಇಂದಿನ ಆಧುನಿಕ ವೈದ್ಯಕೀಯ ಯುಗದಲ್ಲಿ ಪ್ರಾಚೀನ ಮತ್ತು ನವೀನ ವೈದ್ಯಕೀಯ ಪದ್ಧತಿಗಳನ್ನು ಸಮಯೋಚಿತವಾಗಿ ಬಳಸಿಕೊಂಡು ರೋಗಿಗಳ ಕ್ಷೇಮಕ್ಕಾಗಿ ಇರುವ ವಿಪುಲ ಅವಕಾಶಗಳನ್ನು ಹಾಗೂ ಈ ನಿಟ್ಟಿನಲ್ಲಿ ಸಾಗುವ ದಾರಿದೀಪದ ಹಿತವಚನವನ್ನು ತಿಳಿಸಿ ಶುಭಹಾರೈಸಿದರು.

ಮುಖ್ಯ ಅತಿಥಿಗಳಾಗಿ ಜಿಲ್ಲಾ ಆಯುಷ್ ಅಧಿಕಾರಿಯಾದ ಡಾ. ಮೊಹಮ್ಮದ್ ಇಕ್ಬಾಲ್ ಭಾಗವಹಿಸಿದ್ದರು. ವೇದಿಕೆಯಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಪ್ರೊಫೆಸರ್ ಡಾ. ಲೀಲಾಧರ ಡಿವಿ, ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಅಧಿಕಾರಿ ಡಾ. ಹರ್ಷಿತಾ ಪುರುಷೋತ್ತಮ್, ಕೆ ವಿ ಜಿ ಫಾರ್ಮಸಿ ಮತ್ತು ರಿಸರ್ಚ್ ಸೆಂಟರ್ ನ ಸಿ ಇ ಒ ಆದ ಡಾ ಪುರುಷೋತ್ತಮ ಕೆ ಜಿ , ವಿದ್ಯಾರ್ಥಿ ಸಂಘದ ಅಧ್ಯಕ್ಷ ಆರ್ಥಿಕ್ ಕೆ ಎಸ್ ಅವರು ಉಪಸ್ಥಿತರಿದ್ದರು.


ಕಾಲೇಜಿನ ಪ್ರಾಂಶುಪಾಲರಾದ ಪ್ರೊಫೆಸರ್ ಡಾ. ಲೀಲಾದರ್ ಡಿ ವಿ ಇವರು ಸಭೆಯಲ್ಲಿ ಉಪಸ್ಥಿತರಿದ್ದ ಗಣ್ಯರನ್ನು, ವಿದ್ಯಾರ್ಥಿ ಸಮೂಹವನ್ನು ಮತ್ತು ಹೆತ್ತವರನ್ನು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತಾಡುತ್ತ ವಿದ್ಯಾರ್ಥಿಗಳಿಗೆ ಮತ್ತು ಹೆತ್ತವರಿಗೆ ಕಾಲೇಜಿನ ಕಿರುಪರಿಚಯ, ನಡೆದು ಬಂದ ದಾರಿ, ಎನ್.ಸಿ.ಐ.ಎಸ್.ಎಂ. ಹಾಗೂ ರಾಜೀವ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ರೀತಿ ರಿವಾಜುಗಳನ್ನು ವಿವರಿಸಿದರು. ಮುಖ್ಯ ಅತಿಥಿಗಳಾದ ಡಾ. ಮೊಹಮ್ಮದ್ ಇಕ್ಬಾಲ್ ಅವರು ವಿದ್ಯಾರ್ಥಿಗಳಿಗೆ ಆಯುರ್ವೇದದ ಮಹತ್ವ ಹಾಗು ತತ್ವಗಳನ್ನು ತಿಳಿಸುತ್ತಾ ಶುಭ ಹಾರೈಸಿದರು.


ಹೊಸದಾಗಿ ಸೇರಿದ ವಿದ್ಯಾರ್ಥಿಗಳಿಗೆ ವೈದ್ಯಕೀಯ ಕ್ಷೇತ್ರಕ್ಕೆ ಬಿಳಿಕೋಟು ಮತ್ತು ಹೂ (ಕಾಲೇಜಿನ ತ್ರೈ ಮಾಸಿಕ ಪತ್ರಿಕೆಯನ್ನು) ನೀಡಿ ಸ್ವಾಗತಿಸಲಾಯಿತು. ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಾದ ಅಶ್ವಿನಿ ಭಟ್ ಹಾಗೂ ಚಿತ್ಕಲಾ ಭಾರದ್ವಾಜ್ ದೇವರ ನಾಮವನ್ನು ಹಾಡಿದರು. ವಂದನಾರ್ಪಣೆಯನ್ನು ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಅಧಿಕಾರಿಯಾದ ಡಾ. ಹರ್ಷಿತಾ ಪುರುಷೋತ್ತಮ್ ಅವರು ನೆರವೇರಿಸಿದರು. ಕಾರ್ಯಕ್ರಮವನ್ನು ವಿದ್ಯಾರ್ಥಿಗಳಾದ ಕುಮಾರಿ ಲಕ್ಷ್ಮಿ ಸುರೇಶ್ ಮತ್ತು ಯಶಸ್ವಿನಿ ನಿರೂಪಿಸಿದರು.