ಕೃಷಿ ಇಲಾಖೆ ದ.ಕ. ಜಿಲ್ಲಾ ಪಂಚಾಯತ್ ಮಂಗಳೂರು ತಾಲೂಕು ಪಂಚಾಯತ್ ಸುಳ್ಯ ಗ್ರಾಮ ಪಂಚಾಯತ್ ಸಂಪಾಜೆ ಕೃಷಿ, ತೋಟಗಾರಿಕೆ ಇಲಾಖೆ ಸುಳ್ಯ ಇದರ ಜಂಟಿ ಆಶ್ರಯದಲ್ಲಿ ವಿವಿಧ ಸವಲತ್ತು ವಿತರಣೆ, ತರಬೇತಿ ಕಾರ್ಯಕ್ರಮ ಹಾಗೂ ಮಹಿಳಾ ಗ್ರಾಮಸಭೆಯು ಸಂಪಾಜೆ ಗ್ರಾಮ ಪಂಚಾಯತ್ ಸಭಾ ಭವನದಲ್ಲಿ ನಡೆಯಿತು.
ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಸುಮತಿ ಶಕ್ತಿವೇಲು ಅವರು ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಮಂಗಳೂರು ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಡಾ. ಟಿ. ಜೆ. ರಮೇಶ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಕೃಷಿ ವಿಜ್ಞಾನ ಕೇಂದ್ರದಿಂದ ಪರಿಶಿಷ್ಟ ಜಾತಿ ರೈತರಿಗೆ ಸಿಗುವ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿದರು.
ಎನ್.ಆರ್.ಎಲ್.ಎಂ. ಸಂಜೀವಿನಿ ಒಕ್ಕೂಟದ ಕೃಷಿ ಸಖಿಯರ ಮೂಲಕ ಯೋಜನೆಗಳು ಕೃಷಿಕರಿಗೆ ತಲುಪುತ್ತಿದ್ದು ಎನ್.ಆರ್.ಎಲ್.ಎಂ. ಸುಳ್ಯ ತಾಲೂಕು ಕಾರ್ಯಕ್ರಮದ ವ್ಯವಸ್ಥಾಪಕಿ ಶ್ವೇತಾರವರು ಕೃಷಿ ಸಖಿಯರಿಗೆ ಪೂರ್ಣ ಸಹಕಾರ ನೀಡುತ್ತಿದ್ದಾರೆ ಎಂದು ತಿಳಿಸಿದರು.
ಡಾ. ಹರೀಶ್ ಶೆಣೈ ಅವರು ವಿಜ್ಞಾನಿ, ಬೇಸಾಯ ಶಾಸ್ತ್ರ ಕೃಷಿ ವಿಜ್ಞಾನ ಕೇಂದ್ರ ಮಂಗಳೂರಿನ ಎರೆಹುಳ ಗೊಬ್ಬರ ತಯಾರಿಕೆಯ ಬಗ್ಗೆ ಮಾಹಿತಿ ನೀಡಿದರು.
ಸಸ್ಯ ಸಂರಕ್ಷಣೆಯ ವಿಜ್ಞಾನಿ ಡಾ. ಕೇದಾರನಾಥ್ ಅವರು ಬೋರ್ಡೋ ದ್ರಾವಣ ತಯಾರಿಕೆ ಹಾಗೂ ಸಸ್ಯ ಕೃಷಿ ಸಂರಕ್ಷಣೆಯ ಬಗ್ಗೆ ಮಾಹಿತಿ ನೀಡಿದರು.
ತಾ.ಪಂ. ಕಾರ್ಯನಿರ್ವಹಣಾಧಿಕಾರಿ ರಾಜಣ್ಣ ಅವರು ಮಾತನಾಡಿ ಕೃಷಿ ವಿಜ್ಞಾನ ಕೇಂದ್ರದಿಂದ ಎನ್.ಆರ್.ಎಲ್.ಎಂ. ತಾಲೂಕು ಸಂಜೀವಿನಿ ಒಕ್ಕೂಟದ ಕೃಷಿ ಸಖಿಯರ ಮುಖಾಂತರ ಸಿಗುತ್ತಿರುವ ಸೌಲಭ್ಯಗಳ ಬಗ್ಗೆ ಹಾಗೂ ಸಂಪಾಜೆ ಗ್ರಾಮ ಪಂಚಾಯತ್ ಮತ್ತು ಜನರ ನಡುವಿನ ಹೊಂದಾಣಿಕೆ, ಗ್ರಾಮದ ಅಭಿವೃದ್ದಿಯ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು.
ತಾಲೂಕು ಕಾರ್ಯಕದರಮ ವ್ಯವಸ್ಥಾಪಕಿ ಶ್ರೀಮತಿ ಶ್ವೇತಾ ಅವರು ಸಂಜೀವಿನಿ ಒಕ್ಕೂಟದ ಮುಖಾಂತರ ಮಹಿಳೆಯರಿಗೆ ಸಿಗುತ್ತಿರುವ ಸೌಲಭ್ಯಗಳು, ಕೌಶಲ್ಯ ಅಭಿವೃದ್ಧಿ ಇಲಾಖೆಯಿಂದ ಸಿಗುವ ಸೌಲಭ್ಯಗಳ ಬಗ್ಗೆ ಮಾಹಿತಿಯನ್ನು ನೀಡಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಎಸ್. ಕೆ. ಹನೀಫ್, ಸದಸ್ಯರುಗಳಾದ ಜಿ. ಕೆ.ಹಮೀದ್ ಗೂನಡ್ಕ, ಸುಂದರಿ ಮುಂಡಡ್ಕ , ವಿಮಲಾ ಪ್ರಸಾದ್, ಅನುಪಮ, ಉದ್ಯೋಗ ಖಾತ್ರಿ ಯೋಜನೆ ಬಗ್ಗೆ ತಾಲೂಕು ಸಂಯೋಜಕಿ ಹಾಗೂ ಇಂಜಿನಿಯರ್ ಸುಧಾಮ ಅವರು ಮಾಹಿತಿ ನೀಡಿದರು.
ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಶಿಲ್ಪಾ ಸನತ್ ಅವರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಜೊತೆಗೆ ಮಹಿಳಾ ಗ್ರಾಮ ಸಭೆ ನಡೆಯಿತು. ಗ್ರಾಮ ಸಭೆಯಲ್ಲಿ ರಾಜರಾಂಪುರ ಅಂಗನವಾಡಿ ಕೇಂದ್ರದ ನಿವೃತ ಅಂಗನವಾಡಿ ಕಾರ್ಯಕರ್ತೆ ಜಯಂತಿಯವರಿಗೆ ಬೀಳ್ಕೊಡುವ ಕಾರ್ಯಕ್ರಮವು ನಡೆಯಿತು.
ವಿವಿಧ ಇಲಾಖೆಯ ಜಂಟಿ ಕಾರ್ಯಕ್ರಮದಲ್ಲಿ ಪ. ಜಾತಿ ಪ. ಪಂಗಡದ ಫಲಾನುಭವಿಗಳಿಗೆ ಡ್ರಮ್, ಟರ್ಪಲ್ ವಿತರಿಸಲಾಯಿತು.
ಗ್ರಾಮ ಪಂಚಾಯತ್ ವತಿಯಿಂದ ಗ್ರಾಮದ ಮಹಿಳೆಯರಿಗಾಗಿ ಕ್ರೀಡಾಕೂಟ ವಿವಿಧ ಆಟೋಟ ಕಾರ್ಯಕ್ರಮ ನಡೆಸಲಾಗಿದ್ದು ವಿಜೇತರಿಗೆ ಬಹುಮಾನ ಹಾಗೂ ಸಸಿ ವಿತರಣೆಯು ನಡೆಯಿತು.
ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರುಗಳಾದ ಜಗದೀಶ್ ಕೆ.ಪಿ. ಅಂಗನವಾಡಿ ಕಾರ್ಯಕರ್ತೆ ಯಮುನ, ಆರೋಗ್ಯ ಇಲಾಖೆಯ ಚಿತ್ರಾ,ಉಪಸ್ಥಿತರಿದ್ದರು.
ಪಂಚಾಯತ್ ಅಬಿವೃದ್ದಿ ಅಧಿಕಾರಿ ಸರಿತಾ ಡಿಸೋಜಾ ಸ್ವಾಗತಿಸಿ, ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಧರ್ಮಕಲಾ ವಂದಿಸಿದರು. ಗ್ರಾಮದ ಕೃಷಿಸಖಿ ಮೋಹಿನಿ ವಿಶ್ವನಾಥ್ಅವರು ಕಾರ್ಯಕ್ರಮ ನಿರೂಪಿಸಿದರು.