ಬೆಳ್ಳಾರೆ: ಗ್ರಂಥಾಲಯ ಸಪ್ತಹದ 2024 ಅಂಗವಾಗಿ ಸಾಮೂಹಿಕ ಸದಸ್ಯತ್ವ ಅಭಿಯಾನ

0

ಗ್ರಂಥಾಲಯಕ್ಕೆ ಪುಸ್ತಕ ಕೊಡುಗೆ ನೀಡಿ ಸದಸ್ಯತ್ವ ಪಡೆದ ಜ್ಞಾನದೀಪದ ವಿದ್ಯಾರ್ಥಿ ಶಿಕ್ಷಕಿಯರು

ಕರ್ನಾಟಕ ಸರ್ಕಾರ, ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ದ. ಕ. ಜಿಲ್ಲಾ ಪಂಚಾಯತ್ ಮಂಗಳೂರು , ತಾಲೂಕು ಪಂಚಾಯತ್ ಸುಳ್ಯ, ಗ್ರಾಮ ಪಂಚಾಯತ್ ಬೆಳ್ಳಾರೆ, ಗ್ರಾಮ ಪಂಚಾಯತ್ ಗ್ರಂಥಾಲಯ ಮತ್ತು ಅರಿವು ಕೇಂದ್ರ ಬೆಳ್ಳಾರೆ ಆಶ್ರಯದಲ್ಲಿ ಜ್ಞಾನದೀಪ ಮೊಂಟೆಸ್ಸರಿ ಶಿಕ್ಷಕಿಯರ ತರಬೇತಿ ಸಂಸ್ಥೆ ಬೆಳ್ಳಾರೆಯ ಸಹಯೋಗದಲ್ಲಿ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ 2024ರ ಅಂಗವಾಗಿ ಗ್ರಂಥಾಲಯದ ಕಡೆ ನಮ್ಮ ನಡೆ ಪರಿಕಲ್ಪನೆಯಲ್ಲಿ ಬೆಳ್ಳಾರೆಯ ಮೊಂಟೆಸ್ಸರಿ ಶಿಕ್ಷಕಿಯರ ತರಬೇತಿ ಸಂಸ್ಥೆಯ ವಿದ್ಯಾರ್ಥಿ ಶಿಕ್ಷಕಿಯರಿಂದ ಸಾಮೂಹಿಕ ಸದಸ್ಯತ್ವ ಅಭಿಯಾನ ಮತ್ತು ಪುಸ್ತಕ ಗೂಡು ಯೋಜನೆಯಲ್ಲಿ ಗ್ರಂಥಾಲಯದ ಪಾತ್ರ ಎಂಬ ವಿಷಯದ ಬಗ್ಗೆ ಉಪನ್ಯಾಸ ಕಾರ್ಯಕ್ರಮ ನ. 17ರಂದು ನಡೆಯಿತು.

ವಿದ್ಯಾರ್ಥಿ ಶಿಕ್ಷಕಿಯರು ಗ್ರಂಥಾಲಯಕ್ಕೆ ಭೇಟಿ ನೀಡಿ ಪುಸ್ತಕವನ್ನು ಉಡುಗೊರೆಯಾಗಿ ನೀಡಿ ಸದಸ್ಯತ್ವ ಪಡೆದುಕೊಂಡರು. ಶಿಕ್ಷಕಿ ಗೀತಾ ಬಾಲಚಂದ್ರ ಉಪನ್ಯಾಸ ನೀಡಿದರು. ಜ್ಞಾನದೀಪ ಸಂಸ್ಥೆಯ ನಿರ್ದೇಶಕ ಉಮೇಶ್ ಮಣಿಕ್ಕಾರ ಅಧ್ಯಕ್ಷತೆ ವಹಿಸಿದ್ದರು. ಪೆರುವಾಜೆ ಗ್ರಾಮ ಪಂಚಾಯತ್ ಸಿಬ್ಬಂದಿ, ಕವಿಯತ್ರಿ ಅಕ್ಷತಾ ನಾಗನಕಜೆ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದರು. ಗ್ರಂಥಪಾಲಕಿ ಶಶಿಕಲಾ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು. ವಿದ್ಯಾರ್ಥಿ ಶಿಕ್ಷಕಿ ಸುಮಿತ್ರಾ ಕೆ ಸಹಕರಿಸಿದರು.