ದಕ್ಷಿಣ ಕನ್ನಡ ಮತ್ತು ಕೊಡಗು ಗೌಡ ಸಮಾಜ ಅಭಿವೃದ್ಧಿ ಸಂಘದ ಸಭೆ

0

ಜ.6ರಂದು ಸುಳ್ಯದಲ್ಲಿ‌ ಮಹಾಸಭೆ ನಡೆಸಲು ನಿರ್ಣಯ

ದಕ್ಷಿಣ‌ ಕನ್ನಡ ಮತ್ತು ಕೊಡಗು ಗೌಡ ಸಮಾಜ ಅಭಿವೃದ್ಧಿ ಸಂಘದ ಸಭೆಯು ಸುಳ್ಯದ ಶ್ರೀ ವೆಂಕಟರಮಣ ಕ್ರೆಡಿಟ್ ಕೋ – ಆಪರೇಟಿವ್ ಸೊಸೈಟಿಯ ಸಭಾಂಗಣದಲ್ಲಿ ನಡೆಯಿತು.

ಸಂಘದ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಯವರು ಅಧ್ಯಕ್ಷತೆ ವಹಿಸಿದ್ದು, ಪ್ರಾಸ್ತಾವಿಕ ಮಾತನಾಡಿದರು. “ಸಂಘದ ಆರಂಭ ಹಾಗೂ ಸಂಘದ ಸ್ಥಾಪನೆ ಮತ್ತು ದುಡಿದ ಹಿರಿಯರನ್ನು ನೆನಪಿಸಿಕೊಂಡ ಅಧ್ಯಕ್ಷರು, ಸಂಘಕ್ಕೆ ಸುಳ್ಯದಲ್ಲಿ 40 ಸೆಂಟ್ಸ್ ಜಾಗವಿದೆ.‌ ಅದಕ್ಕೆ ಕಾಂಪೌಂಡ್ ಮಾಡುವ ಕಾರ್ಯ ಮಾಡಿದ್ದೇವೆ. ಇನ್ನಷ್ಟು‌ ಯೋಜನೆ ಹಾಕಿಕೊಳ್ಳಲಾಗಿದೆಯಾದರೂ ಕೊರೊನಾ ಬಂದುದರಿಂದ ಹಾಗೂ ಇನ್ನಿತರ ಕಾರಣಗಳಿಂದ ಸಾಧ್ಯವಾಗಿಲ್ಲ. ಮುಂದೆ ತಮ್ಮೆಲ್ಲರ ಅಭಿಪ್ರಾಯದಂತೆ ಮುಂದೆ ಹೋಗೋಣ ಎಂದು‌ ಹೇಳಿದರು.

ಬಳಿಕ ಎಂ.ಪಿ. ಉಮೇಶ್, ಧನಂಜಯ ಅಡ್ಪಂಗಾಯ, ಪೆರಿಯಾನ ಜಯಾನಂದ, ಕೇಶವಾನಂದ ಯಳದಾಳು, ಕುಂಟಿಕಾನ ಲಕ್ಷ್ಮಣ ಗೌಡ, ಡಿ.ಬಿ. ಬಾಲಕೃಷ್ಣ, ಕೆ.ಆರ್. ಗಂಗಾಧರ್, ಚಂದ್ರಾ ಕೋಲ್ಚಾರು, ಡಾ.ಎನ್.ಎ. ಜ್ಞಾನೇಶ್, ಎಸ್.ಆರ್. ಸೂರಯ್ಯ, ನಾಗೇಶ್ ಪುತ್ತೂರು ಮೊದಲಾದವರು ಅಭಿಪ್ರಾಯ ಮಂಡಿಸಿದರು.

ಬಳಿಕ ಜನವರಿ 6 ರಂದು ಸೋಮವಾರ ದಿನ ಸಂಘದ ಮಹಾಸಭೆ ನಡೆಸಲು ನಿರ್ಧರಿಸಲಾಯಿತು.

ಸಂಘದ ಕಾರ್ಯದರ್ಶಿ ಎ.ಸಿ. ನಂದನ್ ವರದಿ ಮಂಡಿಸಿದರೆ, ಕೋಶಾಧಿಕಾರಿ ನಳಿನ್ ಕುಮಾರ್ ಕೋಡ್ತುಗುಳಿ ಲೆಕ್ಕಪತ್ರ ಮಂಡಿಸಿದರು.