ಎಸ್ ಜೆ ಎಂ ಪ್ರತಿಭಾ ಸಂಗಮದಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ಗಾಂಧಿನಗರ ಮದರಸ ವಿದ್ಯಾರ್ಥಿಗಳು

0

ಗಾಂಧಿನಗರ ಮುನವ್ವಿರುಲ್ ಇಸ್ಲಾಂ ಮದ್ರಸ ವಿದ್ಯಾರ್ಥಿಗಳು ಬೈತಡ್ಕ ದಲ್ಲಿ ನಡೆದ SJM ದಕ್ಷಿಣ ಕನ್ನಡ ಈಸ್ಟ್ ಜಿಲ್ಲೆಯ ಪ್ರತಿಭಾ ಸಂಗಮದಲ್ಲಿ ವಿಜೇತರಾಗಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.


ಜಿಲ್ಲಾ ಮಟ್ಟದ ಪ್ರತಿಭಾ ಸಂಗಮದ ವಿವಿಧ ಸ್ಪರ್ಧಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳು ಹೈ ಝೋನ್ ಬುರ್ದ ಆಲಾಪನೆಯಲ್ಲಿ ಹಂಝತುಲ್ ಖರ್ರಾರ್,ಮುಹಮ್ಮದ್ ಲಾಝಿಂ, ಮೊಹಮ್ಮದ್ ಆಶಿಕ್, ಮೊಹಮ್ಮದ್ ಹಿಶಾಂ,ತಂಝಿಮ್ ತಂಡವು ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಗೊಂಡಿದ್ದು, ಹೈ ಜೋನ್ ಸೈನ್ಸ್ ಮಾಡೆಲ್ ನಲ್ಲಿ ಶಮ್ಮಾಸ್ ಅಬ್ದುಲ್ಲ ಹಾಗೂ ಅಬ್ದುಲ್ ರಹಮಾನ್ ಅಲಿ, ಕನ್ನಡ ಹಾಡಿನಲ್ಲಿ ಮಹಮ್ಮದ್ ಲಾಝಿಮ್, ಗ್ರೌಂಡ್ ಜೋನ್ ಹಿಫ್ಜ್ ನಲ್ಲಿ ಅಶಾಝ್ ಝಮೀರ್,ಮಿಡಿಲ್ ಝೋನ್ ಉರ್ದು ಭಾಷಣದಲ್ಲಿ ಹುಜೈರ್ ಅಬ್ಬಾಸ್ ಪ್ರಥಮ ಸ್ಥಾನವನ್ನು ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.