ಭಾರತ ಸಂವಿಧಾನವನ್ನು ಅಂಗೀಕರಿಸಿದ 75ನೇ ವರ್ಷವನ್ನು ಅರ್ಥಪೂರ್ಣವಾಗಿ ಸಂಭ್ರಮಿಸಲು ಗ್ರಾಮ ಪಂಚಾಯತ್ ಅರಿವು ಕೇಂದ್ರಗಳಲ್ಲಿ ನವೆಂಬರ್ 26 ರಿಂದ 28ರ ವರೆಗಿನ ಸಂವಿಧಾನ ಸಂಭ್ರಮ ಕಾರ್ಯಕ್ರಮದ ಉದ್ಘಾಟನೆಯು ದೀಪ ಬೆಳಗಿಸುವುದರ ಮೂಲಕ ಅಜ್ಜಾವರ ಅರಿವು ಕೇಂದ್ರದಲ್ಲಿ ನಡೆಯಿತು.
ಪಂಚಾಯತ್ ಅಧ್ಯಕ್ಷರಾದ ಶ್ರೀ ಮತಿ ದೇವಕಿ ವಿಷ್ಣು ನಗರ ರವರ ಅಧ್ಯಕ್ಷತೆಯಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಸಂವಿಧಾನದ ಪ್ರಸ್ತಾವನೆ, ಡಾ. ಬಿ ಆರ್ ಅಂಬೇಡ್ಕರ್, ಮಹಾತ್ಮ ಗಾಂದೀಜಿ, ಗ್ರಂಥಾಲಯ ವಿಜ್ಞಾನಿ
ಎಸ್ ಆರ್ ರಂಗನಾಥನ್ ರವರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಮಾಡಲಾಯಿತು. ಸಂವಿಧಾನ ದಿನಾಚರಣೆಯ ಮಹತ್ವ ಬಗ್ಗೆ ಎನ್. ಎಮ್. ಸಿ ಸಮಾಜ ಕಾರ್ಯ ವಿಭಾಗದ ವಿದ್ಯಾರ್ಥಿನಿ ಡಿಂಪಲ್ ಎನ್. ಡಿ. ಮಾಹಿತಿ ನೀಡಿದರು.
ಸದಸ್ಯರಾದ ಲೀಲಾ ಮನಮೋಹನ, ಸ. ಹಿ. ಪ್ರಾ. ಶಾಲೆಯ ಸಹ ಶಿಕ್ಷಕಿ ಕಲ್ಪಲತ ಸಂವಿಧಾನ ದಿನಾಚರಣೆಯ ಶುಭಾಶಯ ನುಡಿಗಳನ್ನಾಡಿದರು.
ಸದಸ್ಯರಾದ ಪ್ರಸಾದ್ ಕುಮಾರ್ ರೈ ಮೇನಾಲ, ಅಬ್ದುಲ್ಲ ಎ, ಸತ್ಯವತಿ ಬಸವನಪಾದೆ, ದಿವ್ಯ ಪಡಂಬೈಲು, ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಕಾರ್ಯದರ್ಶಿ, ಗ್ರಂಥಾಲಯ ಮೇಲ್ವಿಚಾರಕರು, ಎನ್. ಎಮ್. ಸಿ ಸಮಾಜ ಕಾರ್ಯ ವಿಭಾಗದ ಅಂತಿಮ ವಿದ್ಯಾರ್ಥಿಗಳಾದ ಡಿಂಪಲ್ ಎನ್. ಡಿ, ಚರಿತ ಎ. ವಿ, ಚಂದನ್ ಹೆಚ್. ಎನ್. ಪುನೀತ್ ರಾಜ್ ಹೆಚ್. ಕೆ, ಅಂಚೆ ಪಾಲಕಿ ಶಾಲಿನಿ ಪಂಚಾಯತ್ ಸಿಬ್ಬಂದಿವರ್ಗದವರು , ಸ. ಹಿ. ಪ್ರಾ. ಶಾಲೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮದ ಸ್ವಾಗತವನ್ನು ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರು, ಪ್ರಾರ್ಥನೆಯನ್ನು ಸ. ಹಿ. ಪ್ರಾ. ಶಾಲೆ ವಿದ್ಯಾರ್ಥಿನಿಯರು, ಧನ್ಯವಾದವನ್ನು ಗ್ರಂಥಾಲಯ ಮೇಲ್ವಿಚಾರಕರು ನೆರವೇರಿಸಿದರು.