ನಮ್ಮ ಪಟ್ಟಾಜಾಗದಲ್ಲಿ ಅವರಿಗೆ ಹೋಗಲು ಅವಕಾಶ ನೀಡಲಾಗಿತ್ತು. ತೋಟದ ಮಧ್ಯೆ ಇದ್ದುದನ್ನು ಬದಲಾಯಿಸಿ ತೋಟದ ಬದಿಯಿಂದಾಗಿ ರಸ್ತೆ ನಿರ್ಮಿಸಿ ಕೊಟ್ಟಿದ್ದೇವೆ

0

ಗುಂಡಿಯಂಗಡಿ : ಮಣ್ಣು ಹಾಕಿ ರಸ್ತೆ ಬಂದ್ ವರದಿಗೆ ಶ್ರೇಯಸ್ ಸುಳ್ಳಿ ಸ್ಪಷ್ಟನೆ

ನೆಲ್ಲೂರು‌ಕೆಮ್ರಾಜೆ ಗ್ರಾಮದ ಗುಂಡಿಯಂಗಡಿ ಸಮೀಪ ಉಮೇಶ್ ಪ್ರಭು ಮತ್ತಿತರರ ಮನೆಗಳಿಗೆ ಹೋಗುವ ರಸ್ತೆಗೆ ಉದ್ದೇಶಪೂರ್ವಕವಾಗಿ ಮಣ್ಣು ಹಾಕಿ ರಸ್ತೆ ತಡೆ ನಡೆಸಲಾಗಿದೆ ಎಂದು ಪತ್ರಿಕೆಯಲ್ಲಿ ಬಂದ ವರದಿ ಸರಿಯಲ್ಲ.

ನಮ್ಮ ಪಟ್ಟಾಜಾಗದಲ್ಲಿ ಅವರಿಗೆ ವಾಹನ ಕೊಂಡೊಯ್ಯಲು ಅವಕಾಶ ನೀಡಲಾಗಿತ್ತು. ಅದು ನಮ್ಮ ತೋಟದ ಮಧ್ಯಭಾಗದಲ್ಲಿ ಇದ್ದು ಕೃಷಿಗೆ ತೊಂದರೆಯಾಗುತ್ತಿದ್ದುದರಿಂದ ನಮ್ಮದೇ ಜಾಗದಲ್ಲಿ ತೋಟದ ಬದಿಯಿಂದಾಗಿ ರಸ್ತೆ ನಿರ್ಮಿಸಿಕೊಟ್ಟಿದ್ದೇವೆ ಎಂದು ಜಾಗದ ಮಾಲಕರಾದ ಶ್ರೇಯಸ್ ಸುಳ್ಳಿಯವರು ಸುದ್ದಿಗೆ ತಿಳಿಸಿದ್ದಾರೆ. ” ನಾನು ನನ್ನ ಸ್ವಂತ ಖಾಸಗಿ ಆಸ್ತಿಯಲ್ಲಿ ಕಾನೂನುಬದ್ಧವಾಗಿ ಕೆಲಸ ಮಾಡುತ್ತಿದ್ದಾಗ ಉಮೇಶ್ ಪ್ರಭು, ಪ್ರವೀಣ್ ರಾವ್, ಕಾರ್ತಿಕ್ ಮತ್ತಿತರರು ಬಂದು ಆಕ್ಷೇಪ ವ್ಯಕ್ತಪಡಿಸಿದರು.

ಬಳಿಕ ಪೋಲೀಸ್ ಮಧ್ಯಪ್ರವೇಶಗೈದು ವಿವಾದ ಇತ್ಯರ್ಥಗೊಂಡಿದೆ ” ಎಂದು ಶ್ರೇಯಸ್ ತಿಳಿಸಿದರು.