ಸುಳ್ಯದ ನಗರ ಪರಿಸರದಲ್ಲಿ ಹಲವು ಸಮಸ್ಯೆಗಳಿದ್ದು ಸ್ಪಂದಸುವಂತೆ ಕೋರಿ ಡಿ.4 ರಂದು ಪೈಚಾರ್ ಅಸ್ತ್ರ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ನಗರ ಪಂಚಾಯತ್ ಮುಖ್ಯಾಧಿಕಾರಿಗೆ ಮನವಿ ನೀಡಲಾಯಿತು.
ಪೈಚಾರಿನಿಂದ ಸುಳ್ಯ ನಗರ ಪ್ರವೇಶ ಮಾಡುವ ರಸ್ತೆಯ ವರೆಗೂ ಬೀದಿ ದೀಪ ಕಂಬಗಳಲ್ಲಿ ದೀಪಗಳಿಲ್ಲದೆ ಕತ್ತಲೆಯಿಂದ ಕೂಡಿದೆ.
ಅಲ್ಲದೆ ಶಾಂತಿನಗರ ತಿರುವಿನಲ್ಲಿರುವ ಹೈ ಮಾಸ್ ದೀಪ ಹಾಳಾಗಿ ರಾತ್ರಿ ವೇಳೆ ಪರಿಸರ ಕತ್ತಲು ಮಯ ವಾಗಿರುತ್ತದೆ.
ಕಳೆದ ಕೆಲವು ದಿನಗಳ ಹಿಂದೆ ಈ ಪ್ರದೇಶದಲ್ಲಿ ಅಂಗಡಿಗಳ ಸರಣಿ ಕಳ್ಳತನ ನಡೆದು ಸ್ಥಳೀಯರಲ್ಲಿ ಆತಂಕಕ್ಕೆ ಕಾರಣವಾಗಿದೆ.
ಶಾಂತಿನಗರ ಪರಿಸರದಲ್ಲಿ ಹಾಗೂ ಸುಳ್ಯದ ಬಹುತೇಕ ಕಡೆಗಳಲ್ಲಿ ಬೀದಿ ನಾಯಿಗಳ ಉಪಟಳ ಜಾಸ್ತಿಯಾಗಿದ್ದು, ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ, ರಸ್ತೆಯಲ್ಲಿ ನಡೆದಾಡುವ ವೃದ್ಧರಿಗೆ ಹಾಗೂ ಮಹಿಳೆಯರಿಗೆ ಬಹಳ ತೊಂದರೆಯಾಗುತ್ತಿದ್ದು ಸೂಕ್ತ ರೀತಿಯಲ್ಲಿ ಕ್ರಮ ಕೈಗೊಳ್ಳಬೇಕೆಂದು ಮನವಿಯಲ್ಲಿ ವಿನಂತಿಸಲಾಗಿದೆ.
ಸುಳ್ಯ ನ. ಪಂ ಮುಖ್ಯಧಿಕಾರಿ ಸುಧಾಕರ್ ರವರಿಗೆ ಸಂಘಟನೆ ವತಿಯಿಂದ ಮನವಿ ನೀಡಲಾಯಿತು.
ಈ ಸಂದರ್ಭದಲ್ಲಿ ಅಸ್ತ್ರ ಸ್ಪೋರ್ಟ್ಸ್ ಕ್ಲಬ್’ನ ಅಧ್ಯಕ್ಷ ರಿಫಾಯಿ, ನಝೀರ್ ಶಾಂತಿನಗರ, ಕಾರ್ಯದರ್ಶಿ ನಾಸಿರ್ ಕೆ.ಪಿ, ಜೊತೆ ಕಾರ್ಯದರ್ಶಿ ಝುಬೈರ್.ಕೆ ಉಪಸ್ಥಿತರಿದ್ದರು.