ಕ್ಯಾಂಪ್ಕೊ ಸಂಸ್ಥೆಯ “ಸಾಂತ್ವನ” ಯೋಜನೆಯಡಿಯಲ್ಲಿ ಕ್ಯಾಂಪ್ಕೊ ಸುಳ್ಯ ಶಾಖೆಯ ಸಕ್ರಿಯ ಸದಸ್ಯ ರಝಾಕ್ ಯಂ.ಎ. ಅವರಿಗೆ ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆಗೆ ರೂಪಾಯಿ ೩ ಲಕ್ಷ ಮೊತ್ತದ ಸಹಾಯಧನದ ಚೆಕ್ನ್ನು ಕ್ಯಾಂಪ್ಕೋ ಸಂಸ್ಥೆಯ ಗೌರವಾನ್ವಿತ ನಿರ್ದೇಶಕರಾದ ಕೃಷ್ಣಪ್ರಸಾದ್ ಮಡ್ತಿಲರವರು ಡಿ. ೦೭ ರಂದು ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಕ್ಯಾಂಪ್ಕೋ ಸಂಸ್ಥೆ ಪುತ್ತೂರು ಪ್ರಾದೇಶಿಕ ವ್ಯವಸ್ಥಾಪಕರಾದ ಪ್ರಕಾಶ್ ಕುಮಾರ್ ಶೆಟ್ಟಿ, ಕ್ಯಾಂಪ್ಕೋ ಶಾಖೆಯ ಪ್ರಬಂಧಕರಾದ ಸಂತೋಷ್ ಪಿ., ಸಕ್ರಿಯ ಸದಸ್ಯ ರಝಾಕ್ ಯಂ ಎ, ಅವರ ಮಗ ಮೊಹಮ್ಮದ ಸಮಜ್ , ಸಹೋದರ ಅಬೂಬಕ್ಕರ್ & ಸಂಸ್ಥೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.