ಕೆ.ಎಸ್.ಆರ್.ಟಿ.ಸಿ. ಬಸ್ ನ ಟಯರ್ ಬ್ಲಾಸ್ಟ್ : ಪ್ರಯಾಣಿಕರಿಗೆ ಗಾಯ

0

ಕೆ.ಎಸ್.ಆರ್.ಟಿ.ಸಿ. ಬಸ್ ನ ಟಯರ್ ಬ್ಲಾಸ್ಟ್ ಆಗಿ ಪ್ರಯಾಣಿಕರು ಗಾಯಗೊಂಡ ಘಟನೆ ಕಂದಡ್ಕ ದಲ್ಲಿ ನಡೆದಿದೆ.

ಸುಳ್ಯದಿಂದ ಗುತ್ತಿಗಾರು ಮಾರ್ಗವಾಗಿ ಕೊಲ್ಲಮೊಗ್ರಕ್ಕೆ ಹೋಗುತ್ತಿದ್ದ ಸರಕಾರಿ ಬಸ್ ಕಂದಡ್ಕ ತಲುಪುತ್ತಿದ್ದಂತೆ ಹಿಂದುಗಡೆ ಬಲ ಬದಿಯ ಟಯರ್ ದೊಡ್ಡ ಸದ್ದಿನೊಂದಿಗೆ ಬ್ಲಾಸ್ಟ್ ಆಯಿತು. ಪ್ರಯಾಣಿಕರು ಬೆಚ್ಚಿ ಬಿದ್ದರು. ಬ್ಲಾಸ್ಟ್ ನ ತೀವ್ರತೆಗೆ ಬಸ್ ನ ಆ ಭಾಗದ ಸೀಟಿನ ಕೆಳ ಬದಿ ಓಪನ್ ಆಯಿತು. ಅಲ್ಲಿ ಕುಳಿತಿದ್ದ ಪ್ರಯಾಣಿಕರಿಗೆ ಗಾಯಗಳಾಯಿತು. ಅವರನ್ನು ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಟಯರ್ ಸವೆದು ಹೋಗಿರುವುದೇ ಬ್ಲಾಸ್ಟ್ ಗೆ ಕಾರಣವೆನ್ನಲಾಗಿದೆ.