ಕಾರು ಢಿಕ್ಕಿ : ಡಿಜಿ ಪ್ಲಸ್ ಮಾಲಕ ಚಂದ್ರಶೇಖರ ನಂಜೆಯವರಿಗೆ ಗಾಯ

0

ರಸ್ತೆ ದಾಟುತ್ತಿದ್ದ ಸಂದರ್ಭ ಬಂದ ಕಾರೊಂದು ಗುದ್ದಿದ ಪರಿಣಾಮ ಸುಳ್ಯದ ಡಿ.ಜಿ.ಪ್ಲಸ್ ಮಾಲಕ ಚಂದ್ರಶೇಖರ ನಂಜೆಯವರು ಗಾಯಗೊಂಡಿರುವ ಘಟನೆ ವರದಿಯಾಗಿದೆ.

ಡಿ.10 ರಂದು ರಾತ್ರಿ ಚಂದ್ರಶೇಖರ ನಂಜೆಯವರು ಬೆಂಗಳೂರಿಗೆ ತೆರಳಲು ಸುಳ್ಯ ಬಸ್ ನಿಲ್ದಾಣಕ್ಕೆ ಬರುತಿದ್ದರು. ಸುಳ್ಯದ ಪೆಟ್ರೋಲ್ ಪಂಪ್ ಕಡೆಯಿಂದ ಖಾಸಗಿ ಬಸ್ ನಿಲ್ದಾಣದ ಕಡೆಗೆ ರಸ್ತೆ ದಾಟುತ್ತಿರುವ ಸಂದರ್ಭದಲ್ಲಿ ಆ ರಸ್ತೆಯಾಗಿ ಬಂದ ಕಾರು ನಂಜೆಯವರಿಗೆ ಗುದ್ದಿತು. ಪರಿಣಾಮ ಅವರು ರಸ್ತೆಗೆ ಬಿದ್ದರು. ಸಣ್ಣ ಪುಟ್ಟ ಗಾಯಗಳಾಗಿದ್ದು ಸುಳ್ಯದ ಆಸ್ಪತ್ರೆಗೆ ಕರೆತಂದು ಬಳಿಕ
ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಈಗ ಚೇತರಿಸಿಕೊಳ್ಳುತ್ತಿರುವುದಾಗಿ ತಿಳಿದುಬಂದಿದೆ.