ಕನಕಮಜಲು ಸಹಕಾರಿ ಸಂಘದ ಆಡಳಿತ ಮಂಡಳಿ ಚುನಾವಣೆ

0

ಕನಕಮಜಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿ. ಜಾಲ್ಸೂರು ಇದರ ನೂತನ ಆಡಳಿತ ಮಂಡಳಿಗೆ ನಿರ್ದೆಶಕರುಗಳ ಆಯ್ಕೆಗೆ ಡಿ.22ರಂದು ಚುನಾವಣೆ ನಡೆಯಲಿದ್ದು, ಸಾಲಗಾರರ ಕ್ಷೇತ್ರದ ಸಾಮಾನ್ಯ ಅಭ್ಯರ್ಥಿಯಾಗಿ ಸಹಕಾರಿ ಸಂಘದ ನಿವೃತ್ತ ಉಪ ಕಾರ್ಯನಿರ್ವಹಣಾಧಿಕಾರಿ ಜಾಲ್ಸೂರಿನ ಗಂಗಾಧರ ಗೌಡ ಕಾಳಮನೆ ಅವರು ಡಿ.12ರಂದು ಚುನಾವಣಾ ಅಧಿಕಾರಿಗಳಿಗೆ ತಮ್ಮ ನಾಮಪತ್ರ ಸಲ್ಲಿಸಿದರು.