ಕನಕಮಜಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿ. ಜಾಲ್ಸೂರು

0

ಕನಕಮಜಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿ. ಜಾಲ್ಸೂರು ಇದರ ನೂತನ ಆಡಳಿತ ಮಂಡಳಿಗೆ ನಿರ್ದೇಶಕರುಗಳ ಆಯ್ಕೆಗೆ ಡಿ‌.22ರಂದು ಚುನಾವಣೆ ನಡೆಯಲಿದ್ದು, ಬಿಜೆಪಿ ಬೆಂಬಲಿತ ಸಹಕಾರ ಭಾರತಿಯ ಹತ್ತು ಮಂದಿ ಅಭ್ಯರ್ಥಿಗಳು ಡಿ.12ರಂದು ಚುನಾವಣಾ ಅಧಿಕಾರಿಗಳಿಗೆ ತಮ್ಮ ಉಮೇದುವಾರಿಕೆಯನ್ನು ಸಲ್ಲಿಸಿದರು.

ಸಾಲಗಾರರಲ್ಲದ ಕ್ಷೇತ್ರದಿಂದ ಉದ್ಯಮಿ ಕೆ. ಸುಧಾಕರ ಕಾಮತ್ ವಿನೋಬನಗರ, ಸಾಲಗಾರ ಸಾಮಾನ್ಯ ಕ್ಷೇತ್ರದಿಂದ ಕುಸುಮಾಧರ ಅರ್ಭಡ್ಕ, ಡಾ. ಗೋಪಾಲಕೃಷ್ಣ ಭಟ್ ಕಾಟೂರು, ಜಿ.ಕೆ. ತಿಲೋತ್ತಮ ಗೌಡ ಕೊಲ್ಲಂತಡ್ಕ, ಕೆ. ರಘುರಾಮ ಗೌಡ ಬುಡ್ಲೆಗುತ್ತು, ಸುನಿಲ್ ಅಕ್ಕಿಮಲೆ, ಸಾಲಗಾರ ಮಹಿಳಾ ಕ್ಷೇತ್ರದಿಂದ ಶ್ರೀಮತಿ ಸವಿತ ಪಿ.ಎಂ. ಪೆರುಮುಂಡ, ಶ್ರೀಮತಿ ದಮಯಂತಿ ಲಿಂಗಪ್ಪ ಗೌಡ ಕೋನಡ್ಕಪದವು, ಸಾಲಗಾರ ಕ್ಷೇತ್ರ ಪರಿಶಿಷ್ಟ ಜಾತಿಯಿಂದ ಎಂ. ವಸಂತ ಮಹಾಬಲಡ್ಕ, ಸಾಲಗಾರ ಕ್ಷೇತ್ರ ಪರಿಶಿಷ್ಟ ಪಂಗಡದಿಂದ ವೆಂಕಪ್ಪ ನಾಯ್ಕ ದೇರ್ಕಜೆ ಅವರು ತಮ್ಮ ನಾಮಪತ್ರಗಳನ್ನು ಸಂಘದ ಪ್ರಧಾನ ಕಛೇರಿಯಲ್ಲಿ ಚುನಾವಣಾಧಿಕಾರಿಗಳಿಗೆ ಸಲ್ಲಿಸಿದರು.