ರಿಫಾಯಿ ಜುಮ್ಮಾ ಮಸ್ಜಿದ್ ಸಮಹಾದಿ – ವಾರ್ಷಿಕ ಮಹಾಸಭೆ

0

ರಿಫಾಯಿ ಜುಮ್ಮಾ ಮಸ್ಜಿದ್ ಸಮಹಾದಿ ಇದರ ವಾರ್ಷಿಕ ಮಹಾಸಭೆಯು ಬೈತಡ್ಕ ಜುಮ್ಮಾ ಮಸ್ಜಿದ್ ಇದರ ಅಧ್ಯಕ್ಷರಾದ ಬಿ.ಪಿ‌‌ ಇಸ್ಮಾಯಿಲ್ ಹಾಜಿ ರವರ ಅಧ್ಯಕ್ಷತೆಯಲ್ಲಿ ಮಸೀದಿಯಲ್ಲಿ ಡಿ.13ರಂದು ಜುಮಾ ನಮಾಝ್ ನ ಬಳಿಕ ನಡೆಯಿತು.

ಖತೀಬ್ ಉಸ್ತಾದರಾದ ರಫೀಕ್ ನಿಝಾಮಿ ಉಸ್ತಾದ್ ರ ದುವಾಃ ಮಾಡಿ ಉದ್ಘಾಟಿಸಿದರು.
ರಿಫಾಯಿ ಜುಮ್ಮಾ ಮಸ್ಜಿದ್ ಸಮಹಾದಿ ಇದರ ಸಮಿತಿ ಸದಸ್ಯರಾದ ಸಿದ್ದೀಕ್ ಅಲೆಕ್ಕಾಡಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಪ್ರ.ಕಾರ್ಯದರ್ಶಿ ಫಲುಲ್ ರಾಗಿಪೇಟೆ ಒಂದು ವರ್ಷದ ವರದಿ ಹಾಗೂ ಲೆಕ್ಕವನ್ನು ಮಂಡಿಸಿದರು

ನಂತರ ಹೊಸ ಸಮಿತಿ ಆಯ್ಕೆ ಮಾಡುವ ಬಗ್ಗೆ ಚರ್ಚೆ ‌ನಡೆದು ಅಂತಿಮವಾಗಿ ಹಳೆ ಸಮಿತಿಯೇ ಮುಂದುವರೆಸುವುದೆಂದು ತೀರ್ಮಾನವಾಗಿ ಅದರಂತೆ ಅಧ್ಯಕ್ಷರಾಗಿ ಸಾದಿಕ್ ಸಮಹಾದಿ,ಉಪಾಧ್ಯಕ್ಷ ಆದಂ, ಪ್ರ.ಕಾರ್ಯದರ್ಶಿ ಫಲುಲ್ ರಾಗಿಪೇಟೆ, ಜೊತೆ ಕಾರ್ಯದರ್ಶಿ ಸಿನಾನ್, ಕೋಶಾದಿಕಾರಿ ಉಮ್ಮರ್ ಫಾರೂಕ್, ಸಮಿತಿ ಸದಸ್ಯರಾಗಿ ಪಿ.ಎಂ ಅಬ್ದುಲ್ ರಹಿಮಾನ್, ಸಾಬುಕುಂಞಿ ಹುದೇರಿ, ಸೈಫುದ್ದೀನ್,ಸಿದ್ದೀಕ್ ಅಲೆಕ್ಕಾಡಿ ಹಾಗೂ ಮಾಮು ಸಮಹಾದಿ ರವರನ್ನು ಒಂದು ವರ್ಷದ ತನಕ ಮುಂದುವರೆಸುವುದೆಂದು ಸರ್ವಾನುಮತದಿಂದ ತೀರ್ಮಾನಿಸಿ ಅನುಮೋದಿಸಲಾಯಿತು.

ನಂತರ ಬೈತಡ್ಕ ಜುಮ್ಮಾ ಮಸ್ಜಿದ್ ಅಧ್ಯಕ್ಷರಾದ ಬಿ.ಪಿ ಇಸ್ಮಾಯಿಲ್ ಹಾಜಿ ರವರು ಅಧ್ಯಕ್ಷೀಯ ಭಾಷಣ ಮಾಡಿ ಸಲಹೆ ಸೂಚನೆಗಳನ್ನು ನೀಡಿ ಸಮಿತಿಗೆ ಶುಭ ಹಾರೈಸಿದರು.

ಸಭೆಯಲ್ಲಿ ದರ್ಗಾ ಶರೀಫ್ ಬೈತಡ್ಕ ಇದರ ಉಪಾಧ್ಯಕ್ಷರಾದ ಸಾಬು ಹಾಜಿ ಕೆಲೆಂಬಿರಿ,ಅಬೂಬಕ್ಕರ್ ಹಾಜಿ ದಫ್,ಕೋಶಾಧಿಕಾರಿ ಇಕ್ಬಾಲ್ ಪಿ.ಬಿ ಹಾಜಿ ಬೈತಡ್ಕ, ಪ್ರಧಾನ ಕಾರ್ಯದರ್ಶಿ ಅಬ್ದುಲ್ಲಾ ಕೆಲೆಂಬಿರಿ,ಸಮಿತಿ ಸದಸ್ಯರಾದ ಮಹಮ್ಮದ್ ಅಲೆಕ್ಕಾಡಿ, ಹಮೀದ್ ಕಾರ್ಕಳ, ಸೇರಿದಂತೆ ರಿಫಾಯಿ ಜುಮ್ಮಾ ಮಸ್ಜಿದ್ ಸಮಹಾದಿ ಇದರ ಎಲ್ಲಾ ಪದಾಧಿಕಾರಿಗಳು ಹಾಗೂ ಜಮಾಅತ್ ಸದಸ್ಯರು ಭಾಗವಹಿಸಿದ್ದರು.
ಸಭೆಯ ವರದಿ ಮತ್ತು ಲೆಕ್ಕಪತ್ರದ ಪ್ರತಿಯನ್ನು ಕೇಂದ್ರ ಜಮಾಅತ್ ಬೈತಡ್ಕ ಮಸೀದಿಯ ಸಮಿತಿಗೆ ಹಸ್ತಾಂತರಿಸಲಾಯಿತು.