ಮಡಪ್ಪಾಡಿ : ಪ್ರಗತಿ ಬಂಧು ಸ್ವಸಹಾಯ ಸಂಘಗಳಿಗೆ ಲಾಭಾಂಶ ವಿತರಣಾ ಕಾರ್ಯಕ್ರಮ

0

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ ಸುಳ್ಯ ತಾಲೂಕು ಇದರ ವತಿಯಿಂದ ಬಲ್ಕಜೆ ಮತ್ತು ಮಡಪ್ಪಾಡಿ ಒಕ್ಕೂಟಗಳ ಸಂಘಗಳಿಗೆ ಲಾಭಾಂಶ ವಿತರಣಾ ಕಾರ್ಯಕ್ರಮವನ್ನು ಒಕ್ಕೂಟದ ಅಧ್ಯಕ್ಷರಾದ ಗೋಪಾಲಕೃಷ್ಣ ರವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು.


ಕಾರ್ಯಕ್ರಮವನ್ನು ಜನಜಾಗೃತಿ ವೇದಿಕೆ ಗುತ್ತಿಗಾರು ವಲಯದ ಅಧ್ಯಕ್ಷರಾದ ಮಿತ್ರದೇವ ಮಡಪ್ಪಾಡಿ ರವರು ದೀಪ ಪ್ರಜಲ್ವಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ “ಯೋಜನೆಯು ನಡೆದು ಬಂದ ದಾರಿ ಮತ್ತು ಅದರಿಂದ ನಾವು ಪ್ರಯೋಜನಗಳನ್ನು ಪಡೆದು ಅಭಿವೃದ್ಧಿಗೊಂಡಿದ್ದೇವೆ, ಇದನ್ನು ನಾವು ಯಾವತ್ತು ಕೂಡ ಮರೆಯಬಾರದು, ಜನಜಾಗೃತಿ ಕಾರ್ಯಕಮದಲ್ಲಿ ಎಷ್ಟೋ ಜನ ದುಶ್ಚಾಟಗಳಿಂದ ದೂರವಿದ್ದು, ಇದರಿಂದ ತುಂಬಾ ಕುಟುಂಬಗಳು ಅಭಿವೃದ್ಧಿಗೊಂಡಿದೆ. ಇದಕ್ಕೆ ಎಲ್ಲಾ ಪ್ರೇರಣೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ” ಎಂದು ಹೇಳಿದರು.


ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಕ್ಷೇತ್ರ ಯೋಜನಾಧಿಕಾರಿಯವರಾದ ಮಾಧವ ಗೌಡರವರು ಮಾತಾನಾಡಿ, ಸುಳ್ಯ ತಾಲೂಕಿನಲ್ಲಿ 2005ರಲ್ಲಿ ಯೋಜನೆ ಪ್ರಾರಂಭಗೊಂಡಿದ್ದು, ಪ್ರಾರಂಭದಲ್ಲಿ ನಾವೆಲ್ಲಾ ನಮ್ಮ ಕುಟುಂಬಗಳು ಯಾವ ಪರಿಸ್ಥಿತಿಯಲ್ಲಿ ಇತ್ತು. ಇದೀಗ ಯೋಜನೆಯಿಂದ ನಮ್ಮ ಕುಟುಂಬಗಳು, ನಮ್ಮ ಗ್ರಾಮಗಳು, ಯಾವ ರೀತಿ ಅಭಿವೃದ್ಧಿ ಗೊಂಡಿದೆ ಎಂದು ಎಲ್ಲಾರಿಗೂ ಗೊತ್ತಿರಿರುವ ವಿಚಾರ. ಆದರೆ ಇತ್ತೀಚಿನ ದಿನಗಳಲ್ಲಿ ನಮ್ಮ ಯೋಜನೆಯ ಕಾರ್ಯಕ್ರಮಗಳನ್ನು ನೋಡಲು ಆಗದೆ ಕೆಲವರು ಅಸೂಯೆಪಡುತ್ತಿದ್ದಾರೆ. ಇದಕ್ಕೆಲ್ಲಾ ನಾವು ಒಗ್ಗೂಟಗಾಗಿ ನಿಲ್ಲಬೇಕು” ಎಂದು ಹೇಳಿದರು.
ಸುಳ್ಯ ತಾಲೂಕಿನ ಜನಜಾಗೃತಿ ವೇದಿಕೆಯ ನಿಕಟಪೂರ್ವ ಅಧ್ಯಕ್ಷರಾದ ಪಿ ಸಿ ಜಯರಾಮ ಮಡಪ್ಪಾಡಿ ರವರು ಮಾತಾನಾಡಿ “ಯೋಜನೆಯಿಂದ ಅನೇಕ ಕುಟುಂಬಗಳು ಅಭಿವೃದ್ಧಿ ಹೊಂದಿದೆ, ಮಹಿಳೆಯರು ಸಬಲೀಕರಣಗೊಂಡಿದ್ದಾರೆ. ಯೋಜನೆಯಿಂದ ಕೃಷಿಗೆ ಪೂರಕವಾಗಿ, ಸ್ವಉದ್ಯೋಗಕ್ಕೆ ಪೂರಕವಾಗಿ, ಗ್ರಾಮದ ಅಭಿವೃದ್ಧಿಗಾಗಿ, ಶಿಕ್ಷಣಕ್ಕೆ ಪೂರಕವಾಗಿ ಅನೇಕ ಲಕ್ಷಂತರ ಅನುದಾನಗಳು ಬಂದಿದೆ. ಮುಂದೆಯು ಕೂಡ ಈ ಯೋಜನೆಯನ್ನು ಬಲಪಡಿಸಿಕೊಂಡು ಹೋಗುವುದು ನಮ್ಮೆಲ್ಲಾರ ಕರ್ತವ್ಯ ಆಗಿದೆ” ಎಂದು ಹೇಳಿದರು. ಈ ಕಾರ್ಯಕ್ರಮದಲ್ಲಿ ಮಡಪ್ಪಾಡಿ ಮತ್ತು ಬಲ್ಕಜೆ ಒಕ್ಕೂಟಗಳ 14 ಸಂಘಗಳಿಗೆ ಒಟ್ಟು ರೂ.4,22,593. ಲಾಭಾಂಶವನ್ನು ವಿತರಣೆಯನ್ನು ಮಾಡಲಾಯಿತು.
ಈ ಸಂದರ್ಭದಲ್ಲಿ ಯೋಜನೆಯಲ್ಲಿ ಪ್ರಾರಂಭದಿಂದ ಉತ್ತಮ ರೀತಿಯಲ್ಲಿ ಸೇವೆಯನ್ನು ನೀಡಿದ ಸುವಿಧಾ ಸಹಾಯಕರಾದ ವಸಂತ ಬಳ್ಳಡ್ಕರವರನ್ನು, ಗೋಪಾಲಕೃಷ್ಣರವರನ್ನು, ಶ್ರೀಮತಿ ಪ್ರೇಮ ಎಸ್ ಆರ್ ರವರನ್ನು ಗುರುತಿಸಿ ಅಭಿನಂದಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಪ್ರಗತಿಬಂಧು ಸ್ವಸಹಾಯ ಸಂಘ ಒಕ್ಕೂಟಗಳ ವಲಯ ಅಧ್ಯಕ್ಷರಾದ ಯೋಗೀಶ್ ದೇವ, ಒಕ್ಕೂಟಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಈ ಕಾರ್ಯಕ್ರಮದಲ್ಲಿ ರತ್ನ ಶ್ರೀ ಸಂಘದ ಸದಸ್ಯರಾದ ಶ್ರೀಮತಿ ಪ್ರೇಮ ಎಸ್ ಆರ್ ರವರು ಸ್ವಾಗತಿಸಿ, ಮಡಪ್ಪಾಡಿ ಕಾರ್ಯಕ್ಷೇತ್ರದ ಸೇವಾಪ್ರತಿನಿಧಿ ಶ್ರೀಮತಿ ಸೌಮ್ಯ ಎಮ್ ಟಿ ವಂದಿಸಿದರು. ವಲಯ ಮೇಲ್ವಿಚಾರಕರಾದ ಬಾಲಕೃಷ್ಣ ಗೌಡ ಕಾರ್ಯಕ್ರಮ ನಿರೂಪಿಸಿದರು.