ಐದು ಮಂದಿ ಅಭ್ಯರ್ಥಿಗಳಿಂದ ನಾಮಪತ್ರ ಹಿಂತೆಗೆತ
ಸಹಕಾರ ಭಾರತಿ 12 – ಸಹಕಾರಿಗಳ ಅಭಿವೃದ್ಧಿ ರಂಗ 12 – ಸ್ವತಂತ್ರ ಸ್ಪರ್ಧೆ 5 ಸೇರಿ ಒಟ್ಟು 29 ಮಂದಿ ಅಂತಿಮ ಕಣದಲ್ಲಿ
ಕನಕಮಜಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿ. ಜಾಲ್ಸೂರು ಆಡಳಿತ ಮಂಡಳಿಯ ಚುನಾವಣೆಗೆ ನಿರ್ದೇಶಕರುಗಳ ಆಯ್ಕೆಗೆ ಡಿ.22ರಂದು ಚುನಾವಣೆ ನಡೆಯಲಿದ್ದು, ಸಹಕಾರ ಭಾರತಿಯ 12 ಮಂದಿ, ಸಹಕಾರಿಗಳ ಅಭಿವೃದ್ಧಿ ರಂಗದ 12 ಹಾಗೂ ಸ್ವತಂತ್ರ ಐದು ಮಂದಿ ಸೇರಿ ಒಟ್ಟು 29 ಮಂದಿ ಅಭ್ಯರ್ಥಿಗಳು ಅಂತಿಮ ಸ್ಪರ್ಧಾ ಕಣದಲ್ಲಿದ್ದಾರೆ.
ಇಲ್ಲಿ ಸಾಲಗಾರರಲ್ಲದ ಕ್ಷೇತ್ರದಿಂದ ಸಹಕಾರಿಗಳ ಅಭಿವೃದ್ಧಿ ರಂಗದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಉಸ್ಮಾನ್ ಅಡ್ಕಾರು ಅವರು ತಮ್ಮ ನಾಮಪತ್ರ ಹಿಂಪಡೆದಿದ್ದು, ಸಹಕಾರಿಗಳ ಅಭಿವೃದ್ಧಿ ರಂಗದ ಅಭ್ಯರ್ಥಿಯಾಗಿ ಸುಬ್ರಹ್ಮಣ್ಯ ಹೊಳ್ಳ ಕಣದಲ್ಲಿದ್ದಾರೆ. ಸಹಕಾರ ಭಾರತಿಯಿಂದ ಉದ್ಯಮಿ ಸುಧಾಕರ ಕಾಮತ್ ಕಣದಲ್ಲಿದ್ದು, ಈ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸೋಣಂಗೇರಿಯ ಸತ್ಯಶಾಂತಿ ತ್ಯಾಗಮೂರ್ತಿ ಅವರು ಕಣದಲ್ಲಿ ಉಳಿದಿದ್ದು ಈ ಕ್ಷೇತ್ರದಿಂದ ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದು, ಗರಿಷ್ಠ ಮತ ಪಡೆಯುವ ಒಬ್ಬರು ನಿರ್ದೇಶಕರಾಗಿ ಆಯ್ಕೆಯಾಗಲಿದ್ದಾರೆ.
ಸಾಮಾನ್ಯ ಮಹಿಳಾ ಕ್ಷೇತ್ರದಿಂದ ಸಹಕಾರ ಭಾರತಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಶ್ರೀಮತಿ ಸವಿತ ಪೆರುಮುಂಡ ಅವರು ತಮ್ಮ ನಾಮಪತ್ರ ಹಿಂಪಡೆದಿದ್ದು, ಈ ಕ್ಷೇತ್ರದಿಂದ ಸಹಕಾರ ಭಾರತಿಯ ಶ್ರೀಮತಿ ವಿನುತ ಸಾರಕೂಟೇಲು ಹಾಗೂ ಶ್ರೀಮತಿ ದಮಯಂತಿ ಲಿಂಗಪ್ಪ ಗೌಡ ಕೋನಡ್ಕಪದವು ಅಂತಿಮ ಕಣದಲ್ಲಿ ಉಳಿದಿದ್ದಾರೆ.
ಸಹಕಾರಿಗಳ ಅಭಿವೃದ್ಧಿ ರಂಗದಿಂದ ಶ್ರೀಮತಿ ತಿರುಮಲೇಶ್ವರಿ ಎ. ಎಲ್. ಹಾಗೂ ಶ್ರೀಮತಿ ಜಯಂತಿ ಕೋಡಿಯಂಗಡಿ ಸ್ಪರ್ಧಾ ಕಣದಲ್ಲಿ ಉಳಿದಿದ್ದು ಸಾಮಾನ್ಯ ಮಹಿಳಾ ಕ್ಷೇತ್ರದಿಂದ ಗರಿಷ್ಠ ಮತ ಪಡೆಯುವ ಇಬ್ಬರು ನಿರ್ದೇಶಕರಾಗಿ ಆಯ್ಕೆಯಾಗಲಿದ್ದಾರೆ.
ಪರಿಶಿಷ್ಟ ಜಾತಿ ಕ್ಷೇತ್ರದಿಂದ ಸಹಕಾರ ಭಾರತಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ವಸಂತ ಮಹಾಬಲಡ್ಕ ಅವರು ತಮ್ಮ ನಾಮಪತ್ರ ಹಿಂಪಡೆದಿದ್ದು, ಈ ಕ್ಷೇತ್ರದಿಂದ ಸಹಕಾರ ಭಾರತಿ ಅಭ್ಯರ್ಥಿಯಾಗಿ ನಿರಂಜನ ಬೊಳುಬೈಲು, ಸಹಕಾರಿಗಳ ಅಭಿವೃದ್ಧಿ ರಂಗದ ಅಭ್ಯರ್ಥಿಯಾಗಿ ನಾರಾಯಣ ಪಂಜಿಗುಂಡಿ ಅಂತಿಮ ಕಣದಲ್ಲಿದ್ದು , ಸ್ವತಂತ್ರ ಅಭ್ಯರ್ಥಿಯಾಗಿ ಜಾಲ್ಸೂರು ಗ್ರಾ.ಪಂ. ಮಾಜಿ ಅಧ್ಯಕ್ಷ ಕೆ.ಎಂ. ಬಾಬು ಕದಿಕಡ್ಕ ಸ್ಪರ್ಧೆಯಲ್ಲಿ ಉಳಿದು, ಗರಿಷ್ಠ ಮತ ಪಡೆಯುವ ಒಬ್ಬರು ನಿರ್ದೇಶಕರಾಗಿ ಆಯ್ಕೆಯಾಗಲಿದ್ದಾರೆ.
ಪರಿಶಿಷ್ಟ ಪಂಗಡ ಕ್ಷೇತ್ರದಿಂದ ಸಹಕಾರ ಭಾರತಿಯ ವೆಂಕಪ್ಪ ನಾಯ್ಕ ದೇರ್ಕಜೆ, ಸಹಕಾರಿಗಳ ಅಭಿವೃದ್ಧಿ ರಂಗದ ಬೋಜಪ್ಪ ನಾಯ್ಕ ಹಾಗೂ ಸ್ವತಂತ್ರ ಅಭ್ಯರ್ಥಿ ಕೃಷ್ಣಪ್ಪ ಮಹಾಬಲಡ್ಕ ಸ್ಪರ್ಧಾ ಕಣದಲ್ಲಿ ಉಳಿದು, ಇಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದು, ಗರಿಷ್ಠ ಮತ ಪಡೆದ ಒಬ್ಬರು ನಿರ್ದೇಶಕರಾಗಿ ಆಯ್ಕೆಯಾಗಲಿದ್ದಾರೆ.
ಸಾಲಗಾರರ ಸಾಮಾನ್ಯ ಕ್ಷೇತ್ರದಿಂದ ಸಹಕಾರಿಗಳ ಅಭಿವೃದ್ಧಿ ರಂಗದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಅಬ್ದುಲ್ ಮಜೀದ್ ಹಾಗೂ ರಾಮಚಂದ್ರ ಗೌಡ ಅಗೋಳ್ತೆ ನಾಮಪತ್ರ ಹಿಂಪಡೆದಿದ್ದು, ಸಹಕಾರ ಭಾರತಿ ಅಭ್ಯರ್ಥಿಗಳಾದ ಕುಸುಮಾಧರ ಅರ್ಭಡ್ಕ, ಡಾ. ಗೋಪಾಲಕೃಷ್ಣ ಭಟ್, ರಘುರಾಮ ಗೌಡ ಬುಡ್ಲೆಗುತ್ತು, ತಿಲೋತ್ತಮ ಗೌಡ ಕೊಲ್ಲಂತಡ್ಕ, ಸುನಿಲ್ ಅಕ್ಕಿಮಲೆ ಹಾಗೂ ಸಹಕಾರಿಗಳ ಅಭಿವೃದ್ಧಿ ರಂಗದ ಅಭ್ಯರ್ಥಿಗಳಾದ ಚೆನ್ನಕೇಶವ ಜಾಲ್ಸೂರು, ಹರಿಪ್ರಕಾಶ್ ಅಡ್ಕಾರು, ಸಿ.ಹೆಚ್. ಅಬ್ದುಲ್ ಖಾದರ್ ಕದಿಕಡ್ಕ, ಅಜಿತ್ ಕಾರಿಂಜ, ವಿಜಯಕುಮಾರ್ ನರಿಯೂರು ಹಾಗೂ ಸ್ವತಂತ್ರ ಅಭ್ಯರ್ಥಿಗಳಾದ ಗಂಗಾಧರ ಗೌಡ ಕಾಳಮನೆ, ಶರತ್ ಅಡ್ಕಾರು ಅಂತಿಮ ಕಣದಲ್ಲಿದ್ದು, ಗರಿಷ್ಠ ಮತ ಪಡೆಯುವ ಐದು ಮಂದಿ ನಿರ್ದೇಶಕರಾಗಿ ಆಯ್ಕೆಯಾಗಲಿದ್ದಾರೆ.
ಹಿಂದುಳಿದ ವರ್ಗ ಪ್ರವರ್ಗ ಎ. ಮೀಸಲು ಕ್ಷೇತ್ರದಿಂದ ಸಹಕಾರ ಭಾರತಿ ಅಭ್ಯರ್ಥಿಯಾಗಿ ಸಂದೀಪ್ ಕದಿಕಡ್ಕ, ಸಹಕಾರಿಗಳ ಅಭಿವೃದ್ಧಿ ರಂಗದ ಅಭ್ಯರ್ಥಿಯಾಗಿ ನ್ಯಾಯವಾದಿ ಮಹಮ್ಮದ್ ಫವಾಜ್ ಕನಕಮಜಲು, ಹಿಂದುಳಿದ ವರ್ಗ ಬಿ ಕ್ಷೇತ್ರದಿಂದ ಸಹಕಾರ ಭಾರತಿ ಅಭ್ಯರ್ಥಿಯಾಗಿ ಗಂಗಾಧರ ರೈ ಸೋಣಂಗೇರಿ, ಸಹಕಾರಿಗಳ ಅಭಿವೃದ್ಧಿ ರಂಗದ ಅಭ್ಯರ್ಥಿಯಾಗಿ ಹೇಮಚಂದ್ರ ಕುತ್ಯಾಳ ಅಂತಿಮ ಕಣದಲ್ಲಿದ್ದು ಗರಿಷ್ಠ ಪಡೆದ ಇಬ್ಬರು ಆಯ್ಕೆಯಾಗಲಿದ್ದಾರೆ.
ಅಂತಿಮವಾಗಿ 29 ಮಂದಿ ಅಂತಿಮ ಸ್ಪರ್ಧಾ ಕಣದಲ್ಲಿ ಉಳಿದಿದ್ದು, ಅಭ್ಯರ್ಥಿಗಳಿಗೆ ಚಿಹ್ನೆಗಳ ಹಂಚಿಕೆ ಕಾರ್ಯ ನಡೆಯಲಿದೆ.