ತಾಲೂಕಿನಲ್ಲಿ ಫೆಬ್ರವರಿ 2025ರ ಅಂತ್ಯದವರೆಗೆ ರಾಷ್ಟ್ರೀಯ ಕಾರ್ಯಕ್ರಮವಾದ ಜಾನುವಾರು ಗಣತಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಪಶು ಆಸ್ಪತ್ರೆಯ ಸುಳ್ಯ ದಲ್ಲಿ ನಾಯಿ, ಬೆಕ್ಕು ಮತ್ತು ಮುದ್ದು ಪ್ರಾಣಿಗಳ ಚಿಕಿತ್ಸಾ ಸೇವೆಯನ್ನು ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಮಾತ್ರ ಒದಗಿಸಲಾಗುವುದು. ಮಧ್ಯಾಹ್ನದ ನಂತರ ತಾಲೂಕಿನ ಎಲ್ಲಾ ಸಿಬ್ಬಂದಿಗಳು ಜಾನುವಾರು ಗಣತಿ ಕಾರ್ಯಕ್ರಮ ದಲ್ಲಿ ಕ್ಷೇತ್ರ ಭೇಟಿ ಮತ್ತು ಮನೆ ಮನೆಗಳಿಗೆ ಭೇಟಿ ನೀಡಬೇಕಿರುವುದರಿಂದ ಸಾರ್ವಜನಿಕರು ಸಹಕರಿಸುವಂತೆ ಕೋರಿದೆ.
ನಾಯಿ ಬೆಕ್ಕು ಮತ್ತು ಇತರ ಮುದ್ದು ಪ್ರಾಣಿಗಳನ್ನು ಹೊರತುಪಡಿಸಿ ಉಳಿದ ಚಿಕಿತ್ಸೆಗಾಗಿ ಇಲಾಖೆಯ ಪಶು ಸಂಜೀವಿನಿ ಸಹಾಯವಾಣಿ 1962 ನ್ನು ಸಂಪರ್ಕಿಸಲು ಕೋರಿದೆ.
ಮಧ್ಯಾಹ್ನ ನಂತರ ಕೇವಲ ತುರ್ತು ಚಿಕಿತ್ಸೆಗಳಿಗೆ ಪಶುವೈದ್ಯಾಧಿಕಾರಿಗಳನ್ನು ಸಂಪರ್ಕಿಸಬಹುದೆಂದು ಸುಳ್ಯ ಪಶು ಸಂಗೋಪನಾ ಇಲಾಖೆಯ ಮುಖ್ಯ ಪಶುವೈದ್ಯಾಧಿಕಾರಿ ಡಾ.ನಿತೀನ್ ಪ್ರಭುಗಳು ತಿಳಿಸಿದ್ದಾರೆ.