ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ

0

ತೊಡಿಕಾನ ಶಾಲೆಗೆ ಬೆಂಚ್ ಡೆಸ್ಕ್ ಕೊಡುಗೆ

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ತೊಡಿಕಾನ ಶಾಲೆಗೆ ನೀಡಲಾದ ಬೆಂಚ್ ಮತ್ತು ಡೆಸ್ಕ್ ಗಳ ಹಸ್ತಾಂತರ ಕಾರ್ಯಕ್ರಮ ಡಿಸೆಂಬರ್ 19ರಂದು ನಡೆಯಿತು.
ಜನಜಾಗೃತಿ ವೇದಿಕೆಯ ಸುಳ್ಯ ತಾಲೂಕು ಅಧ್ಯಕ್ಷ ಲೋಕನಾಥ ಅಮೆಚೂರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ ಡಿ ಎಂ ಸಿ ಅಧ್ಯಕ್ಷ ನವೀನ್ ಎ ಬಿ ವಹಿಸಿದ್ದರು. ಯೋಜನೆಯ ಸಂಪಾಜೆ ವಲಯದ ಮೇಲ್ವಿಚಾರಕ ಗಂಗಾಧರ್, ತೊಡಿಕಾನ ಒಕ್ಕೂಟದ ಅಧ್ಯಕ್ಷ ಜನಾರ್ಧನ ಬಾಳೆಕಜೆ , ತೊಡಿಕಾನ ಸೇವಾ ಪ್ರತಿನಿಧಿ ಸುಂದರ ಬಾಜಿನಡ್ಕ, ಎಸ್ ಡಿ ಎಂ ಸಿ ಮಾಜಿ ಅಧ್ಯಕ್ಷ ತಿಮ್ಮಯ್ಯ ಮೆತ್ತಡ್ಕ ವೇದಿಕೆಯಲ್ಲಿದ್ದರು.


ಶಾಲಾ ಮುಖ್ಯ ಶಿಕ್ಷಕ ಅರುಣ್ ಕುಮಾರ್ ಎಂ ಸ್ವಾಗತಿಸಿದರು. ಸಹ ಶಿಕ್ಷಕ ಬಲರಾಜ್ ಸ್ವಾಗತಿಸಿ, ಶಿಕ್ಷಕಿ ಮಮತಾ ಕಾರ್ಯಕ್ರಮ ನಿರೂಪಿಸಿದರು.