ಕೂರ್ಗ್ ಜಂಇಯ್ಯತುಲ್ ಉಲಮಾ ಗೋಲ್ಡನ್ ಜ್ಯೂಬಿಲಿ ಮಹಾ ಸಮ್ಮೇಳನವು 2025 ಜನವರಿ 12 ರಂದು ಎಮ್ಮೆಮಾಡು ವಿನಲ್ಲಿ ನಡೆಯುವ ಕಾರ್ಯಕ್ರಮದ ಪ್ರಚಾರಾರ್ಥ ಸುಬುಲು ಸ್ಸಲಾಂ ಮದ್ರಸ ವಿದ್ಯಾರ್ಥಿಗಳಿಂದ ಕೊಯನಾಡು ವಿನಿಂದಾ ಚೆಡಾವು ತನಕ ಸೈಕಲ್ ಜಾಥಾವು ನಡೆಯಿತು.
ಜಾಥಾದಲ್ಲಿ ಖತೀಬ್ ಮಹಮ್ಮದ್ ಸಖಾಫಿ ಅಲ್ ಹಿಕಮಿ, ಸದರ್ ಮುಅಲ್ಲಿಂ ನೌಶದ್ ಫಾಳಿಲಿ, ಮಾಜಿ ಅಧ್ಯಕ್ಷ ಮೊಯಿದಿನ್ ಕುಂಞಿ, ಯುಎಇ ಸಮಿತಿ ಅಧ್ಯಕ್ಷ ರಹಮತ್, ಸದಸ್ಯರಾದ ಹಂಸ, ರಫೀಕ್, ಗಫೂರ್, ಅಶ್ರಫ್ ಟಿ ಕೆ, ಉಪಸ್ಥಿತರಿದ್ದರು, ಜಾಥಾದಲ್ಲಿ ಪಾಲ್ಗೊಂಡ ವಿಧ್ಯಾರ್ಥಿಗಳಿಗೆ ಇಸ್ಮಾಯಿಲ್ ಪಿ ಕೆ ತಂಪು ಪಾನೀಯ ವಿತರಿಸಿದರು.