ಕನಕಮಜಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಚುನಾವಣೆ

0

ಸಾಲಗಾರರಲ್ಲದ ಕ್ಷೇತ್ರದಿಂದ ಬಿಜೆಪಿ ಬೆಂಬಲಿತ ಸುಧಾಕರ್ ಕಾಮತ್ ಗೆ ಭರ್ಜರಿ ಜಯ

ಕನಕಮಜಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿಗೆ ಡಿ.22ರಂದು ನಡೆದ ಚುನಾವಣೆಯಲ್ಲಿ ಸಾಲಗಾರರಲ್ಲದ ಕ್ಷೇತ್ರದಿಂದ ಸ್ಪರ್ಧಿಸಿದ್ದ ಬಿಜೆಪಿ ಬೆಂಬಲಿತ ಅಭ್ಯರ್ಥಿ ಸುಧಾಕರ್ ಕಾಮತ್ ರವರು ವಿಜಯಶಾಲಿಯಾಗಿದ್ದಾರೆ.

ಒಟ್ಟು 307 ಮತದಾರರನ್ನು ಹೊಂದಿದ್ದ ಸಾಲಗಾರರಲ್ಲದ ಕ್ಷೇತ್ರದಿಂದ ಬಿಜೆಪಿ ಬೆಂಬಲಿತ ಸುಧಾಕರ್ ಕಾಮತ್ ರವರು 187 ಮತಗಳನ್ನು ಪಡೆದರೆ, ಪ್ರತಿಸ್ಪರ್ಧಿಯಾಗಿದ್ದ ಸುಬ್ರಹ್ಮಣ್ಯ ಹೊಳ್ಳರು 30 ಮತ, ಸತ್ಯಶಾಂತಿ ತ್ಯಾಗಮೂರ್ತಿಯವರು 27 ಮತಗಳನ್ನು ಪಡೆದು ಪರಾಭವಗೊಂಡಿದ್ದಾರೆ.