ನಿವೃತ್ತ ರೇಂಜರ್ ಯು.ಕೆ. ಹೂವಯ್ಯ ಗೌಡರ ಬದುಕಿನ 75 ನೇ ಹುಟ್ಟು ಹಬ್ಬ ಆಚರಣೆ ಹಾಗೂ ಹೂವಯ್ಯ ಗೌಡ – ಯಶೋದಾ ಯು.ಎಚ್. ದಂಪತಿಯ 44 ನೇ ವಿವಾಹ ವಾರ್ಷಿಕೋತ್ಸವವನ್ನು ಡಿ.22 ರಂದು ಅರಂತೋಡು ನೆಹರೂ ಸ್ಮಾರಕ ಕಾಲೇಜಿನ ವಠಾರದಲ್ಲಿ ಆಚರಿಸಲಾಯಿತು.
ಸಭೆಯ ಅಧ್ಯಕ್ಷತೆಯನ್ನು ಲೋಕಯ್ಯ ಗೌಡ ಮಂಗಳೂರು ವಹಿಸಿದ್ದರು. ಕಾರ್ಯಕ್ರಮದ ಬಗ್ಗೆ ನಿವೃತ್ತ ಪ್ರಾಂಶುಪಾಲ ಕೆ.ಆರ್.ಗಂಗಾಧರರವರು ಮಾತನಾಡಿದರು. ನಿವೃತ್ತ ಡಿಎಫ್‌ಒ ಪದ್ಮನಾಭ, ನಿವೃತ್ತ ಆರ್‌ಎಫ್‌ಒ ರಮಾನಂದ, ಕಲ್ಮಡ್ಕ ಸೊಸೈಟಿಯ ನಿರ್ದೇಶಕ ಬಾಲಕೃಷ್ಣ ಗೌಡ ಮತ್ತು ಹೂವಯ್ಯ ದಂಪತಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮದ ನಂತರ ಹೂವಯ್ಯ ದಂಪತಿಗಳನ್ನು ಶಾಲು ಹೊದೆಸಿ, ಹಾರ ಹಾಕಿ, ಪೇಟ ತೊಡಿಸಿ ಸನ್ಮಾನಿಸಲಾಯಿತು. ಮತ್ತು ಸಾರ್ವಜನಿಕರಿಂದ ಸನ್ಮಾನ ಕಾರ್ಯಕ್ರಮ ನಡೆಯಿತು. ದಾಂಪತ್ಯ ಜೀವನದ ೪೪ನೇ ವರ್ಷದ ಪ್ರಯುಕ್ತ ಕುಟುಂಬಸ್ಥರು ಕೇಕ್ ಕಟ್ ಮಾಡಿ ಸಂಭ್ರಮಿಸಿದರು. ಕಾರ್ಯಕ್ರಮದ ಮೊದಲು ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ನಿವೃತ್ತ ಅರಣ್ಯ ಇಲಾಖಾಧಿಕಾರಿ ಹೂವಯ್ಯ ಗೌಡರ ವೃತ್ತಿ ಬದುಕಿನ ಹೆಜ್ಜೆ ಗುರುತುಗಳನ್ನು ಪರಿಚಯಿಸುವ ಕೃತಿ ‘ಹಿನ್ನೋಟ’ವನ್ನು ಸಾಂಕೇತಿಕವಾಗಿ ಬಿಡುಗಡೆಗೊಳಿಸಲಾಯಿತು.