Home Uncategorized ಪಕ್ಷದ ಜವಾಬ್ದಾರಿ ಇರುವವರಿಂದಲೇ ಪಕ್ಷಕ್ಕೆ ವಿರುದ್ಧವಾದ ನಡೆ. ಇದು ಸರಿಯಲ್ಲ : ವೆಂಕಟ್ ವಳಲಂಬೆ

ಪಕ್ಷದ ಜವಾಬ್ದಾರಿ ಇರುವವರಿಂದಲೇ ಪಕ್ಷಕ್ಕೆ ವಿರುದ್ಧವಾದ ನಡೆ. ಇದು ಸರಿಯಲ್ಲ : ವೆಂಕಟ್ ವಳಲಂಬೆ

0

” ಮುರುಳ್ಯ ಎಣ್ಮೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆಯ ಸಂದರ್ಭ ಪಕ್ಷದ ಕಾರ್ಯಕರ್ತರ ಅಭಿಪ್ರಾಯದಂತೆ ಅಭ್ಯರ್ಥಿಗಳನ್ನು ಘೋಷಿಸಲಾಗಿತ್ತು. ಆದರೆ ಜವಾಬ್ದಾರಿ ಹೊಂದಿರುವವರೇ ಪಕ್ಷದ ನಿರ್ಧಾರದ ವಿರುದ್ಧ ನಡೆ ಅನುಸರಿಸಿದ್ದಾರೆ. ಇದು ಸರಿಯಲ್ಲ ” ಎಂದು ಸುಳ್ಯ ಮಂಡಲ ಬಿ.ಜೆ.ಪಿ. ಅಧ್ಯಕ್ಷ ವೆಂಕಟ್ ವಳಲಂಬೆ ತಿಳಿಸಿದ್ದಾರೆ.
ಇಂದು ಸಂಜೆ ಸುದ್ದಿಯೊಂದಿಗೆ ಮಾತನಾಡಿದ ಅವರು ” ಎಣ್ಮೂರಲ್ಲಿ ನಿನ್ನೆ ಪಕ್ಷದ ಕಾರ್ಯಕರ್ತರ ಸಭೆ ನಡೆದಾಗ ಕಾರ್ಯಕರ್ತರ ಅಭಿಪ್ರಾಯದಂತೆ ಹೊಸಬರಿಗೆ ಜವಾಬ್ದಾರಿ ನೀಡಲು ನಿರ್ಧರಿಸಲಾಗಿತ್ತು. ಅದರಂತೆ ಅನೂಪ್ ಬಿಳಿಮಲೆಯವರನ್ನು ಹಾಗೂ ರಾಜೇಂದ್ರ ಶೆಟ್ಟಿಯವರನ್ನು ಅಭ್ಯರ್ಥಿಗಳನ್ನಾಗಿ ಮಾಡಿದ್ದೆವು. ಆದರೆ ಪಕ್ಷದ ಜವಾಬ್ದಾರಿ ಇರುವವರೇ ಪಕ್ಷದ ನಿರ್ಧಾರದ ವಿರುದ್ಧ ನಿಂತುದರಿಂದ ಫಲಿತಾಂಶ ಬೇರೆಯಾಗಿದೆ. ನಾವು ಅದಕ್ಕೆ ತಲೆಕೆಡಿಸಿಕೊಳ್ಳುವುದಿಲ್ಲ. ಪಕ್ಷದ ಸಿದ್ಧಾಂತದ ಪರವಾಗಿ ಹೋದಲ್ಲೆಲ್ಲ ಹೇಳುವವರು ತಮ್ಮ ಊರಲ್ಲೆ ಅದರಂತೆ ನಡೆದುಕೊಳ್ಳದಿರುವುದು ಸರಿಯಲ್ಲ ” ಎಂದು ವೆಂಕಟ್ ವಳಲಂಬೆ ಹೇಳಿದರು.

NO COMMENTS

error: Content is protected !!
Breaking