ಅಜ್ಜಾವರ ದೇವರಕಳಿಯ ಚೈತನ್ಯ ಸೇವಾಶ್ರಮದಲ್ಲಿ ಶ್ರೀ ದೇವಿ ಭಗವತಿ ಮಂದಿರದ 27ನೇ ವರ್ಷದ ಪ್ರತಿಷ್ಠಾ ವಾರ್ಷಿಕೋತ್ಸವವು ಮಾ. 10 ರಂದು ನಡೆಯಲಿರುವುದು.
ಬೆಳಿಗ್ಗೆ ಗಂಟೆ 9-00ಕ್ಕೆ ಗಣಪತಿ ಪೂಜೆ, ಬೆಳಿಗ್ಗೆ ಗಂಟೆ 10-00ಕ್ಕೆ ಶ್ರೀ ಸತ್ಯ ನಾರಾಯಣ ದೇವರ ಪೂಜೆ, ಮಧ್ಯಾಹ್ನ ಗಂಟೆ 11-00ಕ್ಕೆ ಅಡೂರು ಶ್ರೀ ಮಹಾಲಿಂಗೇಶ್ವರ ಭಜನಾ ಸಂಘದವರಿಂದ ಭಜನಾ ಸತ್ಸಂಗ , ಮಧ್ಯಾಹ್ನ 12 ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿರುವುದು.
ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ ಅಧ್ಯಕ್ಷತೆ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಚಂದನ ಸಾಹಿತ್ಯ ವೇದಿಕೆ ಅಧ್ಯಕ್ಷ ಭೀಮರಾವ್ ವಾಷ್ಟರ್, ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಸುಳ್ಯ ತಾಲೂಕು ಘಟಕದ ಅಧ್ಯಕ್ಷೆ ಜಯಶ್ರೀ ಕೊಯಿಂಗೋಡಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಸ್ವಾಮೀಜಿಯವರು ಬರೆದು ಪ್ರಕಟಿಸಿದ 220ನೇ ಕೃತಿ: ಸತ್ಯಂ ವದ ಧರ್ಮಂ ಚರ 221ನೇ ಕೃತಿ: ತಮಸೋ ಮಾ ಜ್ಯೋತಿರ್ಗಮಯ ಬಿಡುಗಡೆಗೊಳ್ಳಲಿದೆ ಎಂದು ಚೈತನ್ಯ ಸೇವಾ ಟ್ರಸ್ಟ್ ನ ಅಧ್ಯಕ್ಷರು ತಿಳಿಸಿದ್ದಾರೆ.