ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆ ಇದರ ಸುಳ್ಯ ವಲಯದ ವಿಶೇಷ ಸಭೆಯು ಮಾ.28ರಂದು ಕಾನತ್ತಿಲ ದೇವಮ್ಮ ಕಾಂಪ್ಲೆಕ್ಸ್ ನಲ್ಲಿ ನಡೆಯಿತು.ಈ ಸಭೆಯಲ್ಲಿ ಸಂಘದ ಸದಸ್ಯರಿಗೆ ಪೋಸ್ಟ್ ಆಫೀಸ್ ನ ಆಕ್ಸಿಡೆಂಟಲ್ ವಿಮೆ ಯೋಜನೆಯನ್ನು ಸಂಘದ ವತಿಯಿಂದ ಮಾಡಲಾಯಿತು. ಕಾರ್ಯಕ್ರಮವನ್ನು ವಲಯದ ಅಧ್ಯಕ್ಷರಾದ ಶಶಿ ಗೌಡ ದೀಪ ಬೆಳಗಿಸಿ ಉದ್ಘಾಟಿಸಿದರು.

ಪೋಸ್ಟ್ವಮಾಸ್ಟರ್ ಮೋಹನ್ ವಿಮೆಯ ಬಗ್ಗೆ ಮಾಹಿತಿ ನೀಡಿದರು. ವೇದಿಕೆಯಲ್ಲಿ ಜಿಲ್ಲಾ ಮಾಧ್ಯಮ ಪ್ರತಿನಿಧಿಯಾದ ಹರೀಶ್ ರಾವ್, ಕೋಶಾಧಿಕಾರಿ ವೆಂಕಟೇಶ್, ಕಾರ್ಯದರ್ಶಿ ದಿನೇಶ್ ಏನೆಕಲ್ಲು, ವಲಯದ ಉಪಾಧ್ಯಕ್ಷ ಪ್ರಶಾಂತ್ ಶೇಣಿ ಮತ್ತು ವಲಯದ ಸದಸ್ಯರು ಉಪಸ್ಥಿತರಿದ್ದರು.