24 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಗಳನ್ನು ಸುಳ್ಯ ಪೊಲೀಸರು ಜ.30 ರಂದು ಕೇರಳದಲ್ಲಿ ಬಂಧಿಸಿದ ಘಟನೆ ನಡೆದಿದೆ.
ಸುಳ್ಯ ಪೊಲೀಸ್ ಠಾಣಾ ಅಕ್ರ: 60/2002 ಕಲಂ: 457, 380 ಐಪಿಸಿ (LPC no. 04/2007)ರಲ್ಲಿ ತಲೆ ಮರೆಸಿಕೊಂಡಿದ್ದ ಆರೋಪಿಗಳಾದ V.T ಬಾಬು @ ಆಗಸ್ಟಿನ್ (55 ವರ್ಷ ) ತಂದೆ : ತೋಮಸ್ ವಾಸ :ವಲಿಯಪರಂಬಿಲ್, ಇಡುಕ್ಕಿ, ಕೇರಳ ಮತ್ತು V.T.ರಾರಿ @ V. T ತೋಮಸ್ (52ವರ್ಷ )ತಂದೆ : ತೋಮಸ್ ವಾಸ :ವಲಿಯಪರಂಬಿಲ್, ಇಡುಕ್ಕಿ, ಕೇರಳ ಎಂಬುವವರುಗಳನ್ನು ಕೇರಳದ ಕೊಟ್ಟಯಂ ಬಳಿ ಡಿವೈಎಸ್ಪಿ ಪುತ್ತೂರು ಉಪವಿಭಾಗ ಮತ್ತು ಸಿ ಪಿ ಐ, ಸುಳ್ಯ ವೃತ್ತ ರವರ ಮಾರ್ಗದರ್ಶನದಲ್ಲಿ ಠಾಣೆಯ ಉಪನಿರೀಕ್ಷಕರಾದ ಸಂತೋಷ್ ಬಿ ಪಿ ಮತ್ತು ಸರಸ್ವತಿ ಬಿ ಟಿ, ಸಹಾಯಕ ಉಪನಿರೀಕ್ಷಕರಾದ ಉದಯ್ ಭಟ್,ಪಿ.ಸಿ ದಿನೇಶ್ ಮತ್ತು ಪಿ.ಸಿ ಪದ್ಮಾವತಿ ರವರು ಗಳನ್ನೊಳಗೊಂಡ ತಂಡ ದಸ್ತಗಿರಿ ಮಾಡಿ ಸುಳ್ಯ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು.ನ್ಯಾಯಾಲಯ ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿರುವುದಾಗಿ ತಿಳಿದು ಬಂದಿದೆ.