ಕಲ್ಮಡ್ಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಗೆ 12 ನಿರ್ದೇಶಕರ ಆಯ್ಕೆಗೆ ಮತದಾನ ನಡೆದು
ಪಿ ಉದಯ ಕುಮಾರ್ ಬೆಟ್ಟ ರವರ ನೇತೃತ್ವದ ಸಮನ್ವಯ ರಂಗ 10 ಸ್ಥಾನ ಮತ್ತು ಸಹಕಾರ ರಂಗದ 2 ಅಭ್ಯರ್ಥಿಗಳು ವಿಜೇತರಾಗಿದ್ದರು.
ಜ.30 ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆಗೆ ಚುನಾವಣೆ ಪ್ರಕ್ರಿಯೆ ನಡೆದಿದ್ದು ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ತಲ ಒಂದು ನಾಮಪತ್ರ ಸಲ್ಲಿಕೆ ಆಗಿದ್ದು ಅವಿರೋಧ ಆಯ್ಕೆಯಾಗಿದೆ.
ಅಧ್ಯಕ್ಷರಾಗಿ ಪಿ ಉದಯಕುಮಾರ್ ಬೆಟ್ಟ, ಉಪಾಧ್ಯಕ್ಷರಾಗಿ ರಾಮ ನಾಯ್ಕ ಉಡುವೆಕೋಡಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಬಳಿಕ ಅವರನ್ನು ಹಾರ,ಶಾಲು ಹೊದಿಸಿ ಗೌರವಿಸಿ ಶುಭ ಹಾರೈಸಿದರು.
ನಿರ್ದೇಶಕರಾದ ರವಿಕಿರಣ ಎ, ಹರೀಶ್ ಎಂ ಮಾಳಪ್ಪಮಕ್ಕಿ, ಅಶೋಕ್ ಗೋಳ್ತಾಜೆ, ವಿಶ್ವನಾಥ ಬೊಳಿಯೂರು,, ಮಹೇಶ್ ಆಕ್ರಿಕಟ್ಟೆ, ಸಂಘದ ನಿಕಟಪೂರ್ವ ನಿರ್ದೇಶಕ ಮಹಮ್ಮದ್ ಹನೀಫ್ ಕೆ ,ಬಾಲಕೃಷ್ಣ ಮೂಲೆಮನೆ, ಗೋಪಾಲ ಪಿ ಪೆರಿಯಪ್ಪು ತೃಪ್ತಿ ಮೀನಾಕ್ಷಿ ಬೊಮ್ಮೆಟ್ಟಿ,ಸುಧಾ ಎಸ್ ಭಟ್ ಮೇಲಿನಮನೆ ಉಪಸ್ಥಿತರಿದ್ದರು.
ತಾಲೂಕು ಪಂಚಾಯತ್ ಮಾಜಿ ಸದಸ್ಯ ಅಬ್ದುಲ್ ಗಫೂರ್, ಕಲ್ಮಡ್ಕ ಗ್ರಾಮ ಪಂಚಾಯತ್ ಸದಸ್ಯ ಲೋಕೇಶ್ ಆಕ್ರಿಕಟ್ಟೆ,ಸದಾಶಿವ ಭಟ್ ಮೇಲ್ಮನೆ, ಇಸ್ಮಾಯಿಲ್ ಪಡ್ಪಿನಂಗಡಿ, ಭವಾನಿ ಬೊಮ್ಮೆಟಿ, ಬಾಲಕೃಷ್ಣ ಬೊಮ್ಮೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಚುನಾವಣಾ ಅಧಿಕಾರಿಯಾಗಿ ಶಿವಲಿಂಗಯ್ಯ ಕರ್ತವ್ಯ ನಿರ್ವಹಿಸಿದ್ದರು. ವಲಯ ಮೇಲ್ವಿಚಾರಕ ಪ್ರದೀಪ್ ಕುಮಾರ್, ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ಜೆ , ಸಂಘದ ಸಿಬ್ಬಂದಿಗಳು ಉಪಸ್ಥಿತರಿದ್ದರು.