ಮಂಡೆಕೋಲು ಕನ್ಯಾನ ಕಾಡಿನಲ್ಲಿ ಆನೆ ಸಾವು

0

ಮಂಡೆಕೋಲು ಗ್ರಾಮದ ಕನ್ಯಾನ ಕಾಡಿನಲ್ಲಿ ಒಂಟಿ ಆನೆಯೊಂದು ಸಾವಿಗೀಡಾಗಿರುವ ಘಟನೆ ವರದಿಯಾಗಿದೆ.

ಇಂದು‌ ಸಂಜೆ ಕಾಡಿಗೆ ಕಟ್ಟಿಗೆಗೆ ಹೋದವರಿಗೆ ಸತ್ತ ಆನೆ ಕಂಡು ಬಂದಿದ್ದು, ಅರಣ್ಯ ಇಲಾಖೆಯವರಿಗೆ ತಿಳಿಸಲಾಗಿದ್ದು, ಸ್ಥಳದಲ್ಲಿ ಅರಣ್ಯ ಇಲಾಖೆಯವರು ಹಾಗೂ ಜನರು ಸೇರಿದ್ದಾರೆಂದು ತಿಳಿದುಬಂದಿದೆ.

ಆನೆಗಳ ಮಧ್ಯೆ ಕಾದಾಟವಾಗಿ ಆನೆ ಸತ್ತಿರುವುದೆಂದು ಹೇಳಲಾಗುತ್ತಿದ್ದು, ದೇಹದಲ್ಲಿ ಗಾಯದ ಗುರುತುಗಳಿವೆ.