Home ಕ್ರೈಂ ನ್ಯೂಸ್ ಪತ್ನಿಗೆ ಗುಂಡಿಕ್ಕಿ ಕೊಲೆ: ಪತಿ ವಿಷಸೇವಿಸಿ ಆತ್ಮಹತ್ಯೆ

ಪತ್ನಿಗೆ ಗುಂಡಿಕ್ಕಿ ಕೊಲೆ: ಪತಿ ವಿಷಸೇವಿಸಿ ಆತ್ಮಹತ್ಯೆ

0

ನೆಲ್ಲೂರು‌‌ ಕೆಮ್ರಾಜೆಯ ಕೋಡಿಮಜಲುನಲ್ಲಿ ನಡೆದ ಘಟನೆ

ಪತ್ನಿಗೆ ಗುಂಡಿಕ್ಕಿ ಕೊಂದು ಪತಿ ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡ ದುರ್ಘಟನೆ ನೆಲ್ಲೂರು‌‌ ಕೆಮ್ರಾಜೆ ಗ್ರಾಮದ ಕೋಡಿಮಜಲು ಎಂಬಲ್ಲಿ ಜ.17ರ ರಾತ್ರಿ‌ ಸಂಭವಿಸಿದೆ.


ನೆಲ್ಲೂರು‌‌ ಕೆಮ್ರಾಜೆ ಗ್ರಾಮದ ಕೋಡಿಮಜಲು ಎಂಬಲ್ಲಿ ರಾಮಚಂದ್ರ ಎಂಬಾತ ತನ್ನ ಪತ್ನಿ ವಿನೋದ ಎಂಬವರನ್ನು ಗುಂಡಿಕ್ಕಿ ಕೊಲೆಗೈದಿದ್ದಾರೆ. ನಂತರ ತಾನು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ವರದಿಯಾಗಿದೆ.

ವಿನೋದವರಿಗೆ 43 ವರ್ಷವಾಗಿದ್ದು, ರಾಮಚಂದ್ರಗೆ 54 ವರ್ಷ ವಯಸ್ಸಾಗಿತ್ತು.
ಕೌಟುಂಬಿಕ ಕಲಹವೇ ಕೃತ್ಯಕ್ಕೆ ಕಾರಣ ಎಂದು ‌ಶಂಕಿಸಲಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

NO COMMENTS

error: Content is protected !!
Breaking