76ನೇ ಗಣರಾಜ್ಯೋತ್ಸವ ಪ್ರಯುಕ್ತ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಸುಳ್ಯ ವಿಧಾನಸಭಾ ಕ್ಷೇತ್ರ ಸಮಿತಿ ವತಿಯಿಂದ ಸುಳ್ಯ ಗಾಂಧಿನಗರದ ಪಕ್ಷದ ಕಚೇರಿಯ ಮುಂಭಾಗದಲ್ಲಿ ಧ್ವಜಾರೋಹಣ ಕಾರ್ಯಕ್ರಮವನ್ನು ಅಧ್ಯಕ್ಷರಾದ ಮೀರಾಝ್ ಸುಳ್ಯರವರು ನೆರವೇರಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಕ್ಷೇತ್ರ ಸಮಿತಿಯ ಸದಸ್ಯರಾದ ಅಡ್ವಕೇಟ್ ಅಬ್ದುಲ್ ರಶೀದ್ ಗೂನಡ್ಕರವರು ಗಣರಾಜ್ಯೋತ್ಸವದ ಸಂದೇಶವನ್ನು ನೀಡಿದರು. ಅಧ್ಯಕ್ಷರಾದ ಮೀರಾಝ್ ಸುಳ್ಯ ರವರು ಸೇರಿರುವ ಜನರಿಗೆ ಸಂವಿಧಾನ ದೀಕ್ಷೆಯನ್ನು ಭೋಧಿಸಿದರು.
ಕ್ಷೇತ್ರ ಸಮಿತಿಯ ಮಾಧ್ಯಮ ಉಸ್ತುವಾರಿಗಳಾದ ಅಶ್ರಫ್ ಟರ್ಲಿ ಯವರ ಸ್ವಾಗತ ಭಾಷಣ ದೊಂದಿಗೆ ಆರಂಭವಾದ ಕಾರ್ಯಕ್ರಮವು, ಕ್ಷೇತ್ರ ಸಮಿತಿಯ ಕಾರ್ಯದರ್ಶಿಯಾದ ಸಿದ್ದೀಕ್ ಕೊಡಿಯಮ್ಮೆ ಯವರ ವಂದನಾರ್ಪಣೆಯೊಂದಿಗೆ ಮುಕ್ತಾಯವಾಯಿತು.
ಕಾರ್ಯಕ್ರಮವನ್ನು ಸುಳ್ಯ ಬ್ಲಾಕ್ ಕಾರ್ಯದರ್ಶಿಯವರಾದ ಸುಹೈಲ್ ಸುಳ್ಯ ರವರು ನಿರೂಪಣೆ ಮಾಡಿದರು.
ಕ್ಷೇತ್ರ ಸಮಿತಿಯ ಕಾರ್ಯದರ್ಶಿಯವರಾದ ರಫೀಕ್ ಎಂ ಎಸ್,
ಸುಳ್ಯ ಬ್ಲಾಕ್ ಉಪಾಧ್ಯಕ್ಷರಾದ ಸಲೀಂ ಗೂನಡ್ಕ, ಹಾಗೂ ಬ್ರಾಂಚ್ ಸಮಿತಿಗಳ ನಾಯಕರುಗಳು ಕಾರ್ಯಕರ್ತರು ಸಾರ್ವಜನಿಕರು ಉಪಸ್ಥಿತರಿದ್ದರು.