ಕೊಡಿಯಾಲ : ರಬ್ಬರು ಗುಡ್ಡೆಗೆ ಆಕಸ್ಮಿಕ ಬೆಂಕಿ – ಹೊತ್ತಿ ಉರಿದ ರಬ್ಬರು ಗುಡ್ಡೆ

0

ಕೊಡಿಯಾಲದಲ್ಲಿ ರಬ್ಬರು ಗುಡ್ಡೆಗೆ ಬೆಂಕಿಬಿದ್ದು ಅಪಾರ ನಷ್ಟ ಸಂಭವಿಸಿದ ಘಟನೆ ಇಂದು ನಡೆದಿದೆ.


ವಿಶ್ವನಾಥ ರೈ ಪೋನಡ್ಕ ಎಂಬವರ ಗುಡ್ಡೆಗೆ ಬೆಂಕಿ ಬಿದ್ದು ರಬ್ಬರು ಗುಡ್ಡೆ ಸುಟ್ಟು ಹೋಗಿದೆ.
ವಿಷಯ ತಿಳಿದ ಸ್ಥಳೀಯರು ಅಗ್ನಿಶಾಮಕದಳದವರಿಗೆ ತಿಳಿಸಿದ್ದು ಅಗ್ನಿಶಾಮಕ ದಳದವರು ಆಗಮಿಸಿ ಬೆಂಕಿ ನಂದಿಸಿದರು.ಸ್ಥಳೀಯರು ಕೂಡ ಬೆಂಕಿ ನಂದಿಸಲು ಸಹಕರಿಸಿದರೆಂದು ತಿಳಿದುಬಂದಿದೆ.