ಸುಳ್ಯದ ವಿದ್ಯಾಮಾತ ಅಕಾಡೆಮಿಯ ಭಾಗ್ಯೇಶ್ ರೈ ಆಯ್ಕೆ
ಪುತ್ತೂರು ತಾಲೂಕು ಕ್ರೀಡಾಂಗಣ ಕೊಂಬೆಟ್ಟು ಇಲ್ಲಿ ಜ.26ರಂದು ತಾಲೂಕು ಆಡಳಿತ ವತಿಯಿಂದ ನಡೆಯುವ ತಾಲೂಕು ಮಟ್ಟದ ಗಣರಾಜ್ಯೋತ್ಸವದ ದಿನಾಚರಣೆಯಂದು ಶಿಕ್ಷಣ ಹಾಗೂ ದೇಶ ಸೇವೆಗೆ ಸಲ್ಲಿಸಿದ ಸೇವೆಗಾಗಿ ವಿದ್ಯಾಮಾತ ಸಂಸ್ಥೆಯ ಭಾಗ್ಯೇಶ್ ರೈ ಅವರನ್ನುಪುತ್ತೂರು ತಾಲೂಕು ಗಣರಾಜ್ಯೋತ್ಸವ ದಿನಾಚರಣೆ ಪ್ರಶಸ್ತಿಗಾಗಿ ಆಯ್ಕೆ ಮಾಡಲಾಗಿದೆ.
ಭಾಗ್ಯೇಶ್ ರೈ ಇವರು ವಿದ್ಯಾಮಾತಾ ಫೌಂಡೇಶನ್ ಮೂಲಕ ಕರಾವಳಿ ಕರ್ನಾಟಕ ಭಾಗದ 200ಕ್ಕೂ ಹೆಚ್ಚು ಯುವ ಅಭ್ಯರ್ಥಿಗಳನ್ನು ಭಾರತೀಯ ಸೇನೆ ಸೇರಿದಂತೆ ವಿವಿಧ ಇಲಾಖೆಗಳ ನೇಮಕಾತಿ ಪರೀಕ್ಷೆಗಳು ಮತ್ತು ಪ್ರವೇಶ ಪರೀಕ್ಷೆಗಳಲ್ಲಿ ಉತ್ತಿರ್ಣರಾಗಲು ತರಬೇತಿ ನೀಡಿದ್ದಾರೆ. ಇವರ ಸಂಸ್ಥೆಯಲ್ಲಿ ಭಾರತೀಯ ಸೇನೆ ಸೇರಿದಂತೆ ಎಲ್ಲಾ ಸಶಸ್ತ್ರ ಪಡೆಗಳಿಗೆ ತರಬೇತಿಯನ್ನು ನೀಡಲಾಗುತ್ತಿದ್ದು.ಪ್ರತಿ ವರ್ಷ ಒಟ್ಟು 100 ಅಭ್ಯರ್ಥಿಗಳಿಗೆ ಉಚಿತ ತರಬೇತಿಯನ್ನು ನೀಡಲಾಗುತ್ತಿದೆ .ಭಾರತ ಸರಕಾರದ ಮಹತ್ವಾಕಾಂಕ್ಷೆ ಯೋಜನೆಯಾದ ಅಗ್ನಿಪಥ್ ಯೋಜನೆಗೆ ಕರಾವಳಿ ಭಾಗದಲ್ಲಿ ಪ್ರಪ್ರಥಮ ಬಾರಿಗೆ ತರಬೇತಿಯನ್ನು ಆಯೋಜನೆ ಮಾಡಿರುವ ಫಲಿತಾಂಶವಾಗಿ ಪ್ರಥಮ ನೇಮಕಾತಿಯಲ್ಲೇ 7 ಅಭ್ಯರ್ಥಿಗಳು ಭಾರತೀಯ ಸೈನ್ಯಕ್ಕೆ ಆಯ್ಕೆಯಾಗಿದ್ದರು. ಇವರ ಸಂಸ್ಥೆಯ ಮೂಲಕ ಈವರೆಗೆ ಸಶಸ್ತ್ರ ಪಡೆಗಳಿಗೆ ಒಟ್ಟು 21 ಅಭ್ಯರ್ಥಿಗಳು ಆಯ್ಕೆಯಾಗಿರುತ್ತಾರೆ.
ಇವರ ಸಂಸ್ಥೆಯ ಮೂಲಕ ಪೊಲೀಸ್ ಇಲಾಖೆ ಹಾಗೂ ಅರಣ್ಯ ಇಲಾಖೆ ನೇಮಕಾತಿಗಳಿಗೂ ತರಬೇತಿಯನ್ನು ನೀಡಲಾಗುತ್ತಿದ್ದು ಒಬ್ಬರು ಸಬ್‌ಇನ್ಸೆಕ್ಟರ್, ಎರಡು ಕಾನ್ಸೆಬಲ್ ಹಾಗೂ ಒಬ್ಬರು ಅರಣ್ಯ ಇಲಾಖೆಯ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಜೊತೆಗೆ ಸುಮಾರು 80 ವಿದ್ಯಾರ್ಥಿಗಳಿಗೆ ಭಾರತೀಯ ಆಡಳಿತ ಸೇವೆಗಳಿಗೆ ಪೂರ್ವಭಾವಿ ತರಬೇತಿಗಳನ್ನು ನೀಡಲಾಗುತ್ತಿದೆ. ಪ್ರಸ್ತುತ ಇನ್ನೂರಕ್ಕು ಮಿಕ್ಕಿದ ವಿದ್ಯಾರ್ಥಿಗಳು ವಿವಿಧ ನೇಮಕಾತಿಗಳು ಹಾಗೂ ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಪ್ರಸ್ತುತ ಇವರು ಜೆಸಿಐ ಪುತ್ತೂರು ಘಟಕದ ಅಧ್ಯಕ್ಷರಾಗಿದ್ದಾರೆ.