ಮುರುಳ್ಯ ಗ್ರಾಮದ ಕಡೀರ ಹುದೇರಿ ಶೀನಪ್ಪ ಗೌಡರು ಹೃದಯಾಘಾತದಿಂದ ಮಂಗಳೂರಿನ ಕೆಎಸ್ ಹೆಗ್ಡೆ ಆಸ್ಪತ್ರೆಯಲ್ಲಿ ಜ. 24ರಂದು ನಿಧನರಾದರು.
ನಿಂತಿಕಲ್ಲಿನಲ್ಲಿದ್ದ ಅವರು ಅಸೌಖ್ಯಕ್ಕೊಳಗಾದಾಗ ತಕ್ಷಣ ಮನೆಗೆ ಬಂದು, ಅಲ್ಲಿಂದ ಕಾಣಿಯೂರು ಪುತ್ತೂರು ಆಸ್ಪತ್ರೆಗೆ ಚಿಕಿತ್ಸೆಗಾಗಿ ಅವರನ್ನು ಕರೆದೊಯ್ದಿದ್ದು, ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಕೆಎಸ್ ಹೆಗ್ಡೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಅವರು ಚಿಕಿತ್ಸೆಗೆ ಸ್ಪಂದಿಸದೆ ನಿಧನರಾದರು.
ಅವರಿಗೆ 71 ವರ್ಷ ವಯಸ್ಸಾಗಿತ್ತು.
ಶೀನಪ್ಪ ಗೌಡರು ನಾಟಿ ವೈದ್ಯರಾಗಿ, ಹುದೇರಿ ತರವಾಡು ಮನೆಯ ದೈವ ಪರಿಚಾರಕರಾಗಿ, ಜನಾನುರಾಗಿಯಾಗಿದ್ದರು.
ಮೃತರು ಪತ್ನಿ ಜಯಶ್ರೀ, ಪುತ್ರ ಪವನ್ ಕುಮಾರ್, ಪುತ್ರಿಯರಾದ ಜೀವಿತ ಜಗದೀಶ್ ಕಲ್ಲಪಣೆ, ಚೈತ್ರ ದೀಕ್ಷಿತ್ ಸಂತೋಡು, ಸಹೋದರ ಜನಾರ್ಧನ ಗೌಡ ಕರಡಿಲು, ಕುಟುಂಬಸ್ಥರು, ಮೊಮ್ಮಕ್ಕಳು, ಬಂಧು ಮಿತ್ರರನ್ನು ಅಗಲಿದ್ದಾರೆ.