ಸುಳ್ಯದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಗಣರಾಜ್ಯೋತ್ಸವ ದಿನಾಚರಣೆ

0

ಆಕರ್ಷಕ ಪಥ ಸಂಚಲನ – ಸಾಧಕರಿಗೆ ಸನ್ಮಾನ

ಸುಳ್ಯ ತಾಲೂಕು ಆಡಳಿತ ಹಾಗೂ ರಾಷ್ಟೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ 76 ನೇ ಗಣರಾಜ್ಯೋತ್ಸವ ದಿನಾಚರಣೆ ಸುಳ್ಯ ಜೂನಿಯರ್ ಕಾಲೇಜು ಮೈದಾನದಲ್ಲಿ ನಡೆಯಿತು.

ಸುಳ್ಯ ತಹಶೀಲ್ದಾರ್ ಶ್ರೀಮತಿ ಮಂಜುಳಾ ರವರು ಧ್ವಜಾರೋಹಣ ನೆರವೇರಿಸಿ, ಪಥ ಸಂಚಲನ ಗೌರವ ವಂದನೆ ಸ್ವೀಕರಿಸಿದರು.
ಸುಳ್ಯ ಪೊಲೀಸ್ ಇಲಾಖೆ, ನಿವೃತ್ತ ಸೈನಿಕರ ಸಂಘ,ಸುಳ್ಯ ಹೋಮ್ಗಾರ್ಡ್ಸ್, ಎನ್ ಸಿ ಸಿ, ಸ್ಕೌಟ್, ಗೈಡ್ಸ್,ವಿದ್ಯಾರ್ಥಿಗಳ, ಹಾಗೂ ಶಾಲಾ ವಿದ್ಯಾರ್ಥಿಗಳು ಸೇರಿದಂತೆ ಸುಮಾರು 26 ತಂಡಗಳು ಪಥ ಸಂಚಲನದಲ್ಲಿ‌ ಭಾಗವಹಿಸಿದ್ದವು.

ಸುಳ್ಯ ಪೊಲೀಸ್ ಠಾಣಾ ಪಿ ಎಸ್ ಐ ಶ್ರೀಮತಿ ಸರಸ್ವತಿ ಬಿ ಟಿ ಪಥ ಸಂಚಲನದ ಕಮಾಂಡಿಗ್ ವಹಿಸಿದ್ದರು.

ಬಳಿಕ ರಾಷ್ಟ್ರಪಿತ ಗಾಂಧಿಜಿ ಹಾಗೂ ಬಾಬಾ ಸಾಹೇಬ್ ಡಾ. ಬಿ ಆರ್ ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನಡೆಯಿತು.

ಈ ಸಂಧರ್ಭದಲ್ಲಿ ತಹಶೀಲ್ದಾರ್ ಮಂಜುಳಾ ರವರು ಗಣರಾಜ್ಯೋತ್ಸವದ ಸಂದೇಶ ನೀಡಿ ‘ದೇಶದ ಸಂವಿಧಾನದ ರಕ್ಷಣೆ ಮತ್ತು ಅದರ ಪಾಲನೆ ಹಾಗೂ ಗೌರವವನ್ನು ಕಾಪಾಡಿಕ್ಕೊಂಡು ಬರುಹುದು ನಮ್ಮೆಲ್ಲರ ಆದ್ಯತೆ ಮತ್ತು ಕರ್ತವ್ಯವೂ ಆಗಿದೆ ಎಂದರು.
ಬಳಿಕ ಸಭಾ ವೇದಿಕೆಯಲ್ಲಿ ರಾಜ್ಯ ಮಟ್ಟದಲ್ಲಿ ಎನ್ ಪಿ ಈ ಪಿ ರಾಷ್ಟೀಯ ಪಾತ್ರಾಭಿನಯದಲ್ಲಿ ದ್ವಿತೀಯ ಬಹುಮಾನ ಪಡೆದ ಜೂನಿಯರ್ ಕಾಲೇಜು ವಿದ್ಯಾರ್ಥಿಗಳಿಗೆ , ಗಣರಾಜ್ಯೋತ್ಸವ ಪೆರೇಡ್ ನಲ್ಲಿ ಭಾಗವಹಿಸಿದ ಅಭಿಷೇಕ್, ಹಾಗೂ 3 ದಶಕ ಗಳಿಂದ ಸುಳ್ಯ ಜೂನಿಯರ್ ಕಾಲೇಜಿನಲ್ಲಿ ದೈಹಿಕ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕ ನಟರಾಜ್ ರವರಿಗೆ ಗೌರವ ಸನ್ಮಾನ ನಡೆಯಿತು.

ಬಳಿಕ ವೇದಿಕೆಯಲ್ಲಿ ಗಣ್ಯರಾಗಿ ಉಪಸ್ಥಿತರಿದ್ದ ಡಾ. ಕೆ ವಿ ಚಿದಾನಂದ, ಹಾಗೂ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ಚಹಿಸಿದ್ದ ನ. ಪಂ ಅಧ್ಯಕ್ಷೆ ಶಶಿಕಲಾ ನೀರಬಿದಿರೆ ಎಸ್ ರವರು ಶುಭಾರೈಸಿದರು.

ಬಳಿಕ ಶಾಲಾ ವಿದ್ಯಾರ್ಥಿಗಳಿಂದ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ವೇದಿಕೆಯಲ್ಲಿ ರಾಜ್ಯ ಸರಕಾರಿ ನೌಕರರ ಸಂಘದ ಸುಳ್ಯ ಶಾಖೆ ಅಧ್ಯಕ್ಷ ಡಾ.ನಿತಿನ್ ಪ್ರಭು, ತಾಲೂಕು ವೈದ್ಯಾಧಿಕಾರಿ ಡಾ. ನಂದ ಕುಮಾರ್, ಸುಳ್ಯ ಜೂನಿಯರ್ ಕಾಲೇಜು ಪ್ರಾಂಶುಪಾಲ ಮೋಹನ್ ಗೌಡ ಬಿಮ್ಮೆಟ್ಟಿ, ಉಪ ಪ್ರಾಂಶುಪಾಲ ಪ್ರಕಾಶ್ ಮೂಡಿತ್ತಾಯ, ಸಮಾಜ ಕಲ್ಯಾಣ ಅಧಿಕಾರಿ ಶ್ರೀಮತಿ ಉಮಾ ದೇವಿ ಉಪಸ್ಥಿತರಿದ್ದರು.

ಸಿ ಇ ಓ ರಾಜಣ್ಣ ಸ್ವಾಗತಿಸಿ, ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಮತಿ ಶೀತಲ್ ವಂದಿಸಿದರು. ಶಿಕ್ಷಕಿ ಶ್ರೀಮತಿ ಚಂದ್ರಮತಿ ಕಾರ್ಯಕ್ರಮ ನಿರೂಪಿಸಿದರು.