ಮೊಗರ್ಪಣೆ ಎಚ್ ಐ ಜೆ ಕಮಿಟಿ ಹಾಗೂ ನೂರುಲ್ ಇಸ್ಲಾಂ ಮದ್ರಸಾ ವತಿಯಿಂದ ಗಣರಾಜ್ಯೋತ್ಸವ ಕಾರ್ಯಕ್ರಮ ಆಚರಿಸಲಾಯಿತು.
ದ್ವಜಾರೋಹಣವನ್ನು ಎಚ್ ಐ ಜೆ ಕಮಿಟಿ ಅಧ್ಯಕ್ಷ ಇಬ್ರಾಹಿಂ ಹಾಜಿ ಸೀ ಫುಡ್ ರವರು ನರವೇರಿಸಿದರು.
ಸ್ಥಳೀಯ ಮುದರ್ರಿಸ್ ಹಾಫಿಲ್ ಶೌಖತ್ ಅಲಿ ಸಖಾಫಿ ದುವಾ ಹಾಗು ಸಂದೇಶ ಭಾಷಣ ಮಾಡಿದರು.
ಸ್ಥಳೀಯ ಕಮಿಟಿ ಪದಾಧಿಕಾರಿಗಳು, ಸದಸ್ಯರು, ವಿದ್ಯಾರ್ಥಿಗಳ ಪೋಷಕರು ಹಾಗೂ ವಿದ್ಯಾರ್ಥಿಗಳು, ಮದ್ರಸ ಅಧ್ಯಾಪಕವೃಂದ ದವರು ಉಪಸ್ಥಿತರಿದ್ದರು.
ಸದರ್ ಮುಅಲ್ಲಿಮ್ ಅಬ್ದುಲ್ ಕರೀಂ ಸಖಾಫಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.