ಮಂಡೆಕೋಲು ಸಹಕಾರ ಸಂಘದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಎಲ್ಲ ಅಭ್ಯರ್ಥಿಗಳು ಭರ್ಜರಿ ಜಯಗಳಿಸಿದ್ದು, ಫಲಿತಾಂಶ ಘೋಷಣೆಯಾಗುತ್ತಲೇ ವಿಜಯೋತ್ಸವ ನಡೆಯಿತು.
ಸೊಸೈಟಿ ಮುಂಭಾಗದ ರಸ್ತೆಯಲ್ಲಿ ಪಟಾಕಿ ಸಿಡಿಸಿ ಸಂಭ್ರಮಾಚರಣೆ ಆಚರಿಸಲಾಯಿತಲ್ಲದೆ, ಬಿಜೆಪಿ ನಾಯಕರು ವಿಜೇತ ಅಭ್ಯರ್ಥಿಗಳಿಗೆ ಹಾರ ಹಾಕಿ ಗೌರವಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ವಿನಯಕುಮಾರ್ ಕಂದಡ್ಕ, ಸುಭೋದ್ ಶೆಟ್ಟಿ ಮೇನಾಲ, ಶಿವಪ್ರಸಾದ್ ಉಗ್ರಾಣಿಮನೆ, ಜಯರಾಮ ಕುಕ್ಕೆಟ್ಟಿ, ವಿಜೇತರ ಪರವಾಗಿ ಸುರೇಶ್ ಕಣೆಮರಡ್ಕ ಮಾತನಾಡಿದರು.
ನೂರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಇದ್ದರು.