ಕರ್ನಾಟಕ ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾಮಂಡಳ ಬೆಂಗಳೂರು ಇದರ ಆಡಳಿತ ಮಂಡಳಿಗೆ ಇಂದು ನಡೆದ ಚುನಾವಣೆಯಲ್ಲಿ ಸುಳ್ಯದ ಸಹಕಾರಿ ಧುರೀಣ ಚಂದ್ರಾ ಕೋಲ್ಷಾರ್ ಅವರು ಅಧಿಕ ಪಡೆದು ಜಯ ಗಳಿಸಿದ್ದಾರೆ.
ಸಹಕಾರ ಪತ್ತಿನ ಸಂಘಗಳ ಮಹಾಮಂಡಲದ ಆಡಳಿತ ಮಂಡಳಿಗೆ ನಡೆಯುವ ಚುನಾವಣೆಯಲ್ಲಿ ವಿಭಾಗವಾರು ನಿರ್ದೇಶಕರ ಆಯ್ಕೆಯಾಗುತ್ತದೆ. ಮೈಸೂರು ವಿಭಾಗದಿಂದ ಮೂರು ಮಂದಿ ನಿರ್ದೇಶಕರು ಆಯ್ಕೆಯಾಗಬೇಕಾಗಿತ್ತು. ಇದಕ್ಕಾಗಿ ಐದು ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದರು. ಎಚ್.ಅಶೋಕ್, ಚಿತ್ತರಂಜನ್ ಬೋಳಾರ್, ಚಂದ್ರಶೇಖರ್ ಎಸ್., ಚಂದ್ರಾ ಕೋಲ್ಚಾರ್ ಮತ್ತು ಮಾಜಿ ಸಚಿವೆ ಮೋಟಮ್ಮ – ಈ ಐವರು ಅಭ್ಯರ್ಥಿ ಗಳಾಗಿದ್ದರು.
ಮಹಾಮಂಡಲಕ್ಕೆ ಸದಸ್ಯರಾಗಿರುವ ಸಹಕಾರ ಸಂಘಕ್ಕೆ ಮಾತ್ರ ಮತದಾನದ ಅವಕಾಶವಿದ್ದು, ಆ ರೀತಿ ಸದಸ್ಯರಾಗಿರುವ ಸಹಕಾರ ಸಂಘದ ಸದಸ್ಯರು ಮಾತ್ರ ಚುನಾವಣೆಗೆ ಸ್ಪರ್ಧಿಸಬಹುದಾಗಿದೆ. ಮೈಸೂರು ವಿಭಾಗದಲ್ಲಿ ಒಟ್ಟು 71 ಸಹಕಾರ ಸಂಘಗಳು ಮಹಾಮಂಡಲಕ್ಕೆ ಸದಸ್ಯರಾಗಿದ್ದು, ಈ 71 ಮತದಾರ ಸಂಸ್ಥೆಗಳ ಪೈಕಿ 69 ಮಂದಿ ಪ್ರತಿನಿಧಿಗಳು ಚುನಾವಣೆಯಲ್ಲಿ ಭಾಗವಹಿಸಿ ಮತ ಚಲಾಯಿಸಿದರು.
ಚುನಾವಣೆ ನಡೆದು ಮತ ಎಣಿಕೆ ನಡೆದಾಗ ಸುಳ್ಯದವರಾದ ಚಂದ್ರಾ ಕೋಲ್ಚಾರ್ ರವರು 41 ಮತಗಳನ್ನು ಪಡೆದು ಚುನಾಯಿತರಾದರು. ಎಚ್.ಅಶೋಕ್ ರಿಗೆ 58, ಚಂದ್ರಶೇಖರ್ ಎಸ್. ರವರಿಗೆ 57 ಮತಗಳು ಲಭಿಸಿ ವಿಜಯಿಗಳಾಗಿದ್ದಾರೆ. ಮೋಟಮ್ಮರಿಗೆ 25 ಮತಗಳು ಹಾಗೂ ಚಿತ್ತರಂಜನ್ ಬೋಳಾರರಿಗೆ 7 ಮತಗಳು ದೊರೆತು ಪರಾಭವಗೊಂಡರು.