12 ರಲ್ಲಿ 11 ಸ್ಥಾನಗಳನ್ನು ಗೆದ್ದು ಬೀಗಿದ ಬಿಜೆಪಿ, 1 ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡ ಕಾಂಗ್ರೆಸ್
ಯೇನೆಕಲ್ಲು ಪ್ರಾ.ಕೃ.ಪ.ಸ.ಸಂಘದ ನೂತನ ಆಡಳಿತ ಮಂಡಳಿ ನಿರ್ದೇಶಕರ ಸ್ಥಾನಕ್ಕೆ ಜ. 27ರಂದು ಚುನಾವಣೆ ನಡೆದಿದ್ದು, ಬಿಜೆಪಿ 11 ಸ್ಥಾನಗಳಲ್ಲಿ ಜಯಗಳಿಸಿದರೆ, ಕಾಂಗ್ರೆಸ್ 1 ಸ್ಥಾನವನ್ನು ಪಡೆಯಲಷ್ಟೇ ಶಕ್ತವಾಗಿದೆ.
ಒಟ್ಟು 12 ನಿರ್ದೇಶಕರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಸಾಮಾನ್ಯ ಸ್ಥಾನದಿಂದ 6, ಪ.ಜಾತಿ ಮೀಸಲು ಕ್ಷೇತ್ರದಿಂದ 1, ಪ.ಪಂಗಡ ಮೀಸಲು ಕ್ಷೇತ್ರದಿಂದ 1, ಹಿಂದುಳಿದ ಪ್ರವರ್ಗ ಎ ಮತ್ತು ಬಿ ಯಿಂದ ತಲಾ ಒಂದೊಂದು, ಹಾಗೂ ಮಹಿಳಾ ಮೀಸಲು ಕ್ಷೇತ್ರದಿಂದ 2 ನಿರ್ದೇಶಕರ ಆಯ್ಕೆ ನಡೆದಿದೆ. ಬಿಜೆಪಿ ಬೆಂಬಲಿತ
ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಾಗಿ ಹಾಲಿ ಅಧ್ಯಕ್ಷ ಭವಾನಿಶಂಕರ ಪೂಂಬಾಡಿಯವರ ನೇತೃತ್ವದಲ್ಲಿ ಸಾಮಾನ್ಯ ಸ್ಥಾನದಿಂದ ಸ್ಪರ್ಧಿಸಿದ ಭವಾನಿಶಂಕರ ಪೂಂಬಾಡಿ, ಹಾಲಿ ಉಪಾಧ್ಯಕ್ಷ ಭರತ್ ನೆಕ್ರಾಜೆ, ಶಿವಪ್ರಸಾದ್ ಮಾದನಮನೆ, ದುರ್ಗಾಪ್ರಸಾದ್ ಪರಮಲೆ, ಗೋಪಾಲ ಎಂ. ಮಾಣಿಬೈಲು ವಿಜಯಿಗಳಾಗಿದ್ದಾರೆ. ಮಹಿಳಾ ಮೀಸಲು ಕ್ಷೇತ್ರದಿಂದ ಶ್ರೀಮತಿ ವಿಶಾಲಾಕ್ಷಿ ದಯಾನಂದ ಕುಕ್ಕಪ್ಪನಮನೆ, ಶ್ರೀಮತಿ ಶಶಿಕಲಾ ಕುಶಾಲಪ್ಪ ಅಮೈ ಜಯಗಳಿಸಿದ್ದಾರೆ. ಹಿಂದುಳಿದ ಪ್ರವರ್ಗ ಎ ಮೀಸಲು ಕ್ಷೇತ್ರದಿಂದ ತಿಮ್ಮಪ್ಪ ಪೂಜಾರಿ ಉಜಿರ್ ಕೋಡಿ ವಿಜೇತರಾಗಿದ್ದಾರೆ. ಬಿ ಮೀಸಲು ಕ್ಷೇತ್ರದಿಂದ ಪ್ರಶಾಂತ್ ದೋಣಿಮನೆ, ಪ.ಪಂಗಡ ದಿಂದ ರಮೇಶ್ ನಾಯ್ಕ ಬೂದಿಪಳ್ಳ, ಪ.ಜಾತಿ ಮೀಸಲು ಕ್ಷೇತ್ರದಿಂದ ಗಿರೀಶ್ ಪದ್ನಡ್ಕ ವಿಜಯಿಗಳಾಗಿದ್ದಾರೆ.
ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಾಗಿ ಸಾಮಾನ್ಯ ಕ್ಷೇತ್ರದಿಂದ ಸ್ಪರ್ಧಿಸಿದ್ದ ನಿಕಟಪೂರ್ವ ತಾ.ಪಂ. ಸದಸ್ಯ ಅಶೋಕ್ ನೆಕ್ರಾಜೆ ಏಕ ಮಾತ್ರ ಕಾಂಗ್ರೆಸ್ ಬೆಂಬಲಿತರಾಗಿ ಜಯಗಳಿಸಿದ್ದಾರೆ. ಉಳಿದಂತೆ ಮಾಜಿ ನಿರ್ದೇಶಕ ರಾಮಯ್ಯ ಎಂ.ಎಂ. ಮಾದನಮನೆ, ಗಂಗಾಧರ ಮಲ್ಲಾರ, ದೇವಿಪ್ರಸಾದ್ ಮಾಣಿಬೈಲು, ವೆಂಕಟ್ರಮಣ ಕೇಂಬ್ರೋಳಿ, ಪ.ಜಾತಿ ಮೀಸಲು ಸ್ಥಾನದಿಂದ ಸ್ಪರ್ಧಿಸಿದ್ದ ದೀಕ್ಷಿತ್ ಪಿ.ಟಿ ಪದ್ನಡ್ಕ, ಪ.ಪಂಗಡ ಮೀಸಲು ಕ್ಷೇತ್ರದಿಂದ ಸ್ಪರ್ಧೆಗಿಳಿದ ದಾಮೋದರ ಎಂ ಮರಕತ, ಮಹಿಳಾ ಮೀಸಲು ಕ್ಷೇತ್ರದಿಂದ ಶ್ರೀಮತಿ ಯಮುನಾ ಗುಂಡಗದ್ದೆ, ಲತಾ ಕುಮಾರಿ ಅಂಬೆಕಲ್ಲು, ಹಿ.ಪ್ರವರ್ಗ ಎ ಮೀಸಲು ಕ್ಷೇತ್ರದಿಂದ ಸ್ಪರ್ಧಿಸಿದ್ದ ಸೀತಾರಾಮ ಬೈರೋನಿ, ಬಿ. ಮೀಸಲು ಕ್ಷೇತ್ರದಿಂದ ಪ್ರಶಾಂತ್ ಕೋಡಿಬೈಲು ಪರಾಜಿತರಾಗಿದ್ದಾರೆ.