ಹಿಮಾಯತುಲ್ ಇಸ್ಲಾಂ ಜಮಾಅತ್ ಕಮಿಟಿ ವತಿಯಿಂದ ದೇಶದ 56 ನೇ ಗಣರಾಜ್ಯೋತ್ಸವ ಆಚರಿಸಲಾಯಿತು
ಜಮಾಅತ್ ಅಧ್ಯಕ್ಷರಾದ ಮುಹಮ್ಮದ್ ಕುಂಞಿ ಗೂನಡ್ಕ ಧ್ವಜಾರೋಹಣ ಮಾಡಿ ಮಾತನಾಡಿ ಬಾರತದ ಸಂವಿಧಾನದ ಆಶಯಗಳನ್ನು ಎಲ್ಲರೂ ಪಾಲಿಸಿ ಕೊಂಡು ನಾಡಿನ ಸಮಸ್ತ ಜನರೊಂದಿಗೆ ಸಹಬಾಳ್ವೆ ಯೊಂದಿಗೆ ಬದುಕುವಂತೆ ಕರೆ ನೀಡಿದರು.
ಸ್ಥಳೀಯ ಖತೀಬರಾದ ಅಬೂಬಕ್ಕರ್ ಸಿದ್ದೀಖ್ ಸಖಾಪಿ ಅಲ್ ಹರ್ಷದಿಯವರು ಮಾತನಾಡಿ ಭಾರತವು ಸರ್ವ ಜನಾಂಗದವರು ಶಾಂತಿಯುತವಾಗಿ ಜೀವನ ನಡೆಸುವಂತಹ ದೇಶವಾಗಿದೆ
ನಮ್ಮ ಪೂರ್ವಜರು ವಸಾಹತು ಸಾಹಿಗಳಾದ ಪರಕೀಯರ ವಿರುದ್ದ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ವನ್ನು ದೊರಕಿಸಿ ಕೊಟ್ಟಿದ್ದೂ ಅಲ್ಲದೆ ದೇಶ ವಾಸಿಗಳು ನೆಮ್ಮದಿಯಿಂದ ಬದುಕುವಂತಹ ಸರ್ವ ದರ್ಮೀಯರಿಗೂ ಧರ್ಮಗಳನ್ನು ಪಾಲಿಸಿಕೊಂಡು ಬದುಕಲು ಅವಕಾಶ ಮಾಡಿಕೊಟ್ಟಂತಹ ಸಂವಿಧಾನವನ್ನು ಗೌರವಿಸುವುದು ನಮ್ಮಲ್ಲರ ಕರ್ತವ್ಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಜಮಾಅತ್
ಮುಹಲ್ಲಿಮರಾದ ಅಬ್ದುಲ ಲತೀಪ್ ಸಖಾಪಿ,
ಜಮಾಅತ್ ಉಪಾಧ್ಯಕ್ಷರಾದ ಉಮ್ಮರ್ ಪುತ್ರಿ,
ಪ್ರದಾನ ಕಾರ್ಯದರ್ಶಿ ಅಶ್ರಪ್ ಎಸ್ ಎ,ಕೋಶಾದಿಕಾರಿ ಅಬ್ದುಲ್ ಕಾದರ್ ಕುಂಭಕೋಡ್,
ಜಮಾಅತ್ ಮಾಜಿ ಅಧ್ಯಕ್ಷರುಗಳಾದ ಹಾಜಿ ಉಮ್ಮರ್ ಪಿ ಎ,ಹಾಜಿ ಅಬ್ದುಲ್ಲಾ ಕೊಪ್ಪದಕಜೆ
ಅಲ್ ಅಮೀನ್ ಗೂನಡ್ಕ ಇದರ ಅಧ್ಯಕ್ಷರಾದ ಜಾಪರ್ ಸಾದಿಖ್ ಗೂನಡ್ಕ, ಮತ್ತು ಸಮಿತಿ ಸದಸ್ಯರು
ಕೆ ಎಂ ಜೆ ಗೂನಡ್ಕ ಅಧ್ಯಕ್ಷರಾದ ಎಸ್ ಎಂ ಅಬ್ದುಲ್ಲಾ, ಎಸ್ ವೈ ಎಸ್ ಕಾರ್ಯದರ್ಶಿ ಹಾರಿಸ್ ಕೆ ಎಸ್,
ಎಸ್ ಎಸ್ ಎಪ್ ಅದ್ಯಕ್ಷರಾದ ಉನೈಸ್ ಪಿ ಯು ,
ಹಿರಿಯರಾದ ಹಾಜಿ ಅಬ್ಬಾಸ್ ಗೂನಡ್ಕ,ಹಾಗೂ ಜಮಾಅತ್ ಕಾರ್ಯಕಾರಿ ಸಮಿತಿ ಸದಸ್ಯರು.
ಜಮಾಅತ್ ಸದಸ್ಯರು,
ಸುನ್ನೀ ಸಂಘಟನೆಗಳ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ಜಮಾಅತ್ ಕಾರ್ಯದರ್ಶಿ ಅಝರುದ್ದೀನ್ ಸಿ ಎ ಸ್ವಾಗತಿಸಿದರು
ಪಂಚಾಯತ್ ಸದಸ್ಯರಾದ ಸವಾದ್ ಗೂನಡ್ಕ ರವರು ಸಂವಿಧಾನ ಪೀಠಿಕೆಯನ್ನು ವಾಚಿಸಿದರು
ಅಲ್ ಅಮೀನ್ ಎಲ್ಫೇರ್ ಅಸೋಸಿಯೇಷನ್ (ರಿ) ಗೂನಡ್ಕ ವತಿಯಿಂದ ಸಿಹಿ ತಿಂಡಿಗಳನ್ನು ಹಂಚಲಾಯಿತು