ಅಮರಮುಡ್ನೂರು ಗ್ರಾಮದ ದಾಸನಕಜೆ ಕುಂಟಿಕಾನ ತರವಾಡಿನ ಶ್ರೀ ಧರ್ಮ ದೈವ ಪಂಜುರ್ಲಿ ಹಾಗೂ ಸಪರಿವಾರ ದೈವ ಸ್ಥಾನದಲ್ಲಿ ಶ್ರೀ ದೈವಗಳ ಧರ್ಮ ನಡಾವಳಿ ಯು ಫೆ.1 ಮತ್ತು 2 ರಂದು ನಡೆಯಲಿರುವುದು. ಫೆ.1 ರಂದು ಪೂರ್ವಾಹ್ನ ಗಣಪತಿ ಹವನವಾಗಿ ಶ್ರೀ ಸತ್ಯನಾರಾಯಣ ದೇವರ ಪೂಜೆಯು ನಡೆದು ಪ್ರಸಾದ ವಿತರಣೆಯಾಗಿ ಮಧ್ಯಾಹ್ನ ಅನ್ನ ಸಂತರ್ಪಣೆ ನಡೆಯಲಿದೆ.
ಅಪರಾಹ್ನ ಗಂಟೆ 3.42 ರಿಂದ 4-48ರ ಮಿಥುನ ಲಗ್ನದಲ್ಲಿ ಶ್ರೀ ದೈವಗಳ ಭಂಡಾರ ತೆಗೆದು ಪರಿವಾರ ದೈವಗಳ ನೇಮೋತ್ಸವ ನಡೆಯಲಿದೆ. ಫೆ.2 ರಂದು ಶ್ರೀ ಧರ್ಮ ದೈವ ಪಂಜುರ್ಲಿ ದೈವದ ನೇಮೋತ್ಸವವು ನಡೆದು ಮಧ್ಯಾಹ್ನ ಪ್ರಸಾದ ವಿತರಣೆಯಾಗಿ ಅನ್ನ ಸಂತರ್ಪಣೆಯು ನಡೆಯಲಿರುವುದಾಗಿ ಕುಟುಂಬದ ತರವಾಡು ದೈವಸ್ಥಾನದ ಅಧ್ಯಕ್ಷರು, ಮಾಜಿ ಸಚಿವರಾದ ಎಸ್.ಅಂಗಾರ ರವರು ತಿಳಿಸಿರುತ್ತಾರೆ.